ಸಿಡ್ನಿ(ಅ.11) : ವಿಶ್ವದ ವೇಗದ ಓಟಗಾರ ಖ್ಯಾತಿಯ ಜಮೈಕಾದ ಉಸೇನ್ ಬೋಲ್ಟ್, ತಮ್ಮ ಬಾಲ್ಯದ ವೃತ್ತಿಪರ  ಫುಟ್ಬಾಲರ್ ಆಗುವ ಕನಸನ್ನು ನನಸಾಗಿಸಿಕೊಳ್ಳುವ
ಹಾದಿಯಲ್ಲಿದ್ದಾರೆ. ಬೋಲ್ಟ್ ಶುಕ್ರವಾರ ಸೆಂಟ್ರಲ್ ಕೋಸ್ಟ್ ಮರೈನರ್ ತಂಡದ ಪರ, ಮ್ಯಾಕ್‌ಆರ್ಥರ್ ಸೌತ್‌ವೆಸ್ಟ್ ಯುನೈಟೆಡ್ ವಿರುದ್ಧದ ಸೌಹಾರ್ದಯುತ ಫುಟ್ಬಾಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. 

‘ಇದು ನನ್ನ ಜೀವನದ ಮಹತ್ವದ ಹೆಜ್ಜೆಯಾಗಿದೆ. ನನಗೆ ಬಹಳಷ್ಟು ಸಂತಸವಾಗಿದ್ದು, ಈಗ ಮೊದಲಿಗಿಂತಲೂ ಸುಧಾರಿಸಿದ್ದೇನೆ. ಪಂದ್ಯದ ವೇಳೆ ನನ್ನ ದೇಹ ಮತ್ತು ಚೆಂಡನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ಕಲಿತಿದ್ದೇನೆ’ ಎಂದು ಬೋಲ್ಟ್ ಹೇಳಿದ್ದಾರೆ. 

8 ಬಾರಿ ಒಲಿಂಪಿಕ್ಸ್ ಚಾಂಪಿಯನ್ ಬೋಲ್ಟ್, ಆಗಸ್ಟ್ ತಿಂಗಳ ಕೊನೆಯಲ್ಲಿ ಚೊಚ್ಚಲ ಬಾರಿಗೆ ಫುಟ್ಬಾಲ್ ಆಡಿದ್ದರು. ವಿಶ್ವದ ಅತೀ ವೇಗದ ಓಟಗಾರನೆಂದೇ ಖ್ಯಾತಿ ಗಳಿಸಿರುವ ಬೋಲ್ಟ್ ಒಲಿಂಪಿಕ್ ಕ್ರೀಡೆಯಲ್ಲಿ ಐತಿಹಾಸಿಕ ದಾಖಲೆ ಬರೆದ ಕ್ರೀಡಾಪಟುವಾಗಿದ್ದಾರೆ.