‘‘ಬೋಲ್ಟ್ ಒಬ್ಬ ಅಸಾಮಾನ್ಯ ರನ್ನರ್. ಅವರ ದಾಖಲೆ ಮುರಿಯುವುದು ಅಸಾಧ್ಯವೇ ಸರಿ, ಆದರೂ, ಅವರ 200 ಮೀ. ದಾಖಲೆಗಿಂತ 100 ಮೀ. ದಾಖಲೆಯನ್ನು ಹಿಂದಿಕ್ಕಬಹುದು’’- ಅಸಾ ಪೊವೆಲ್

ಲಂಡನ್(ನ.19): ವಿಶ್ವ ಶರವೇಗಿ, ಜಮೈಕಾ ರನ್ನರ್ ಉಸೇನ್ ಬೋಲ್ಟ್ ಅವರ ವೈಯಕ್ತಿಕ 100 ಮೀ. ಓಟದ ದಾಖಲೆಯನ್ನು ಅವರ 200ಮೀ ಓಟದ ದಾಖಲೆಗಿಂತ ಸುಲಭವಾಗಿ ಹಿಂದಿಕ್ಕಬಹುದು ಎಂದು ಜಮೈಕಾದ ಮತ್ತೋರ್ವ ಓಟಗಾರ ಅಸಾ ಪೊವೆಲ್ ಹೇಳಿದ್ದಾರೆ.

ದೆಹಲಿ ಹಾಫ್ ಮ್ಯಾರಾಥಾನ್ ಓಟದ ಪ್ರಚಾರ ರಾಯಭಾರಿಯಾಗಿರುವ ಪೊವೆಲ್, ‘‘ಬೋಲ್ಟ್ ಒಬ್ಬ ಅಸಾಮಾನ್ಯ ರನ್ನರ್. ಅವರ ದಾಖಲೆ ಮುರಿಯುವುದು ಅಸಾಧ್ಯವೇ ಸರಿ, ಆದರೂ, ಅವರ 200 ಮೀ. ದಾಖಲೆಗಿಂತ 100 ಮೀ. ದಾಖಲೆಯನ್ನು ಹಿಂದಿಕ್ಕಬಹುದು’’ ಎಂದರು.

ಅಂದಹಾಗೆ ಬೋಲ್ಟ್ 2009ರಲ್ಲಿ ಬರ್ಲಿನ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಓಟವನ್ನು 9.58ಸೆ.ಗಳಲ್ಲಿ ಮತ್ತು 200 ಮೀ ಓಟವನ್ನು 19.19ಸೆ.ಗಳಲ್ಲಿ ಪೂರೈಸಿ ದಾಖಲೆ ಬರೆದಿದ್ದರು.