US Open 2022 ಮೂರನೇ ಸುತ್ತಿಗೆ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್
ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆಯಿಟ್ಟ ಸ್ವಿಯಾಟೆಕ್
2017ರ ಯುಎಸ್ ಓಪನ್ ಚಾಂಪಿಯನ್ ಎದುರು ಭರ್ಜರಿ ಜಯಭೇರಿ
ಈ ಋುತುವಿನಲ್ಲಿ ಇಗಾ ಸ್ವಿಯಾಟೆಕ್‌ಗೆ 50ನೇ ಗೆಲುವು
ನ್ಯೂಯಾರ್ಕ್(ಆ.03): 2 ಬಾರಿ ಫ್ರೆಂಚ್ ಓಪನ್ ಚಾಂಪಿಯನ್, ಹಾಲಿ ವಿಶ್ವ ನಂ.1 ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಯುಎಸ್ ಓಪನ್ ಗ್ರ್ಯಾನ್ ಸ್ಲಾಂ ಮಹಿಳಾ ಸಿಂಗಲ್ಸ್ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಗುರುವಾರ ನಡೆದ 2ನೇ ಸುತ್ತಿನಲ್ಲಿ 2017ರ ಯುಎಸ್ ಓಪನ್ ವಿಜೇತೆ ಅಮೆರಿಕದ ಸ್ಲೋನ್ ಸ್ಟೀಫನ್ಸ್ ವಿರುದ್ಧ 6-3, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಇದು ಈ ಋುತುವಿನಲ್ಲಿ ಸ್ವಿಯಾಟೆಕ್‌ಗೆ 50ನೇ ಗೆಲುವು ಎನ್ನುವುದು ವಿಶೇಷ.
3ನೇ ಸುತ್ತಿಗೆ ನಡಾಲ್: ಪುರುಷರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಇಟಲಿಯ ಫ್ಯಾಬಿಯೊ ಫಾಗ್ನಿನಿ ವಿರುದ್ಧ 2-6, 6-4, 6-2, 1-6 ಸೆಟ್‌ಗಳಲ್ಲಿ ಜಯಿಸಿ 3ನೇ ಸುತ್ತಿಗೆ ಪ್ರವೇಶಿಸಿದರು. ದಾಖಲೆಯ 23ನೇ ಗ್ರ್ಯಾನ್ ಸ್ಲಾಂ ಮೇಲೆ ಕಣ್ಣಿಟ್ಟಿರುವ ನಡಾಲ್ 3ನೇ ಸುತ್ತಿನಲ್ಲಿ ಫ್ರಾನ್ಸ್‌ನ ರಿಚರ್ಡ್ ಗ್ಯಾಸ್ಕೆಟ್ ವಿರುದ್ಧ ಸೆಣಸಲಿದ್ದಾರೆ.
ಡಬಲ್ಸ್: ಮೊದಲ ಸುತ್ತಲ್ಲಿ ಸೋತ ಸೆರೆನಾ-ವೀನಸ್
ನಾಲ್ಕೂವರೆ ವರ್ಷಗಳಲ್ಲಿ ಮೊದಲ ಬಾರಿಗೆ ಒಟ್ಟಿಗೆ ಆಡಿದ ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್‌ಗೆ ನಿರಾಸೆ ಉಂಟಾಗಿದೆ. ಯುಎಸ್ ಓಪನ್ ಮಹಿಳಾ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ವಿಲಿಯಮ್ಸ್ ಸಹೋದರಿಯರು ಚೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಹಾಗೂ ಲಿಂಡಾ ನೊಸ್ಕೊವಾ ವಿರುದ್ಧ 6-7(5), 4-6 ಸೆಟ್‌ಗಳಲ್ಲಿ ಸೋಲುಂಡರು. ಸೆರೆನಾ ಹಾಗೂ ವೀನಸ್ ಜೋಡಿ 14 ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದೆ.
3ನೇ ಸುತ್ತಿಗೇರಿದ ಸೆರೆನಾ ವಿಲಿಯಮ್ಸ್
ನ್ಯೂಯಾರ್ಕ್: ವೃತ್ತಿಬದುಕಿನ ಅಂತಿಮ ಗ್ರ್ಯಾನ್ ಸ್ಲಾಂ ಆಡುತ್ತಿರುವ ಅಮೆರಿಕದ ಸೆರೆನಾ ವಿಲಿಯಮ್ಸ್ ಯುಎಸ್ ಓಪನ್‌ನಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ವಿಶ್ವ ನಂ.2 ಎಸ್ಟೋನಿಯಾದ ಆ್ಯನೆಟ್ ಕೊಂಟಾವೆಟ್ ವಿರುದ್ಧ 7-6(4), 2-6, 6-2 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 40 ವರ್ಷದ ಸೆರೆನಾ 24ನೇ ಗ್ರ್ಯಾನ್ ಸ್ಲಾಂ ಸಿಂಗಲ್ಸ್ ಪ್ರಶಸ್ತಿಯೊಂದಿಗೆ ವೃತಿಬದುಕಿಗೆ ವಿದಾಯ ಹೇಳಲು ಎದುರು ನೋಡುತ್ತಿದ್ದಾರೆ.
ಶುಕ್ರವಾರ ನಡೆಯಲಿರುವ 3ನೇ ಸುತ್ತಿನಲ್ಲಿ ಆಸ್ಪ್ರೇಲಿಯಾದ ಆಲಾ ಟಾಮ್ಲನೊವಿಚ್ ವಿರುದ್ಧ ಸೆಣಸಲಿದ್ದಾರೆ. ಮೊದಲ ಬಾರಿಗೆ ಈ ಇಬ್ಬರು ಮುಖಾಮುಖಿಯಾಗಲಿದ್ದಾರೆ. ಇದೇ ವೇಳೆ ಹಾಲಿ ಚಾಂಪಿಯನ್ ಬ್ರಿಟನ್‌ನ ಎಮ್ಮಾ ರಾಡುಕಾನು, 2 ಬಾರಿ ಯುಎಸ್ ಓಪನ್ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಫ್ರಾನ್ಸ್‌ನ ಕಾರ್ನೆಟ್ ವಿರುದ್ಧ 3-6, 3-6ರಲ್ಲಿ ರಾಡುಕಾನು ಸೋಲನುಭವಿಸಿದರೆ, ಅಮೆರಿಕದ ಡೇನಿಯಲ್ ಕಾಲಿನ್ಸ್ ವಿರುದ್ಧ ಒಸಾಕ 6-7, 3-6ರಲ್ಲಿ ಪರಾಭವಗೊಂಡರು.
National Shooting Trials: ಮಹಿಳೆಯರ ಏರ್ ಪಿಸ್ತೂಲ್ T6 ಗೆದ್ದ ದಿವ್ಯಾ ಟಿಎಸ್
ಕಳೆದ ಆವೃತ್ತಿಯ ರನ್ನರ್-ಅಪ್ ಅಮೆರಿಕದ ಲಾಯ್ಲಾ ಫೆರ್ನಾಂಡಿಸ್, ವಿಶ್ವ ನಂ.3 ಗ್ರೀಸ್‌ನ ಮರಿಯಾ ಸಕ್ಕಾರಿ ಸಹ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ 3ನೇ ಸುತ್ತಿಗೇರಿದರೆ, ಸ್ಪೇನ್‌ನ ರಾಫೆಲ್ ನಡಾಲ್ 2ನೇ ಸುತ್ತಿಗೆ ಪ್ರವೇಶಿಸಿದ್ದಾರೆ.