ಕಳೆದ ಏಪ್ರಿಲ್'ನಲ್ಲಿ ಸಿಂಗಪೂರ್ ಓಪನ್'ನಲ್ಲಿ ಕೆ. ಶ್ರೀಕಾಂತ್ ಹಾಗೂ ಬಿ. ಸಾಯಿ ಪ್ರಣೀತ್ ಪ್ರಶಸ್ತಿಗಾಗಿ ಕಾದಟ ನಡೆಸಿದ್ದರು, ಈ ಬಾರಿ ಯುಎಸ್ ಓಪನ್'ನಲ್ಲಿ ಕಶ್ಯಪ್ ಹಾಗೂ ಪ್ರಣಯ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.

ಅನಾಹೀಮ್(ಯುಎಸ್): ಭಾರತದ ಸ್ಟಾರ್ ಶಟ್ಲರ್‌'ಗಳಾದ ಪಿ.ಕಶ್ಯಪ್ ಮತ್ತು ಎಚ್.ಎಸ್. ಪ್ರಣಯ್, ಯುಎಸ್ ಓಪನ್ ಗ್ರ್ಯಾನ್ ಪ್ರೀ ಗೋಲ್ಡ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ನಡೆದ ಸೆಮಿಫೈನಲ್‌'ನಲ್ಲಿ ಕೊರಿಯಾದ ಕ್ವಾಂಗ್ ಹೀ ಹಿಯೊ ವಿರುದ್ಧ 15-21, 21-15, 21-16 ಗೇಮ್‌'ಗಳ ಅಂತರದಿಂದ ಕಶ್ಯಪ್ ಗೆಲುವು ಸಾಧಿಸಿದರು.

ಇದಕ್ಕೂ ಮುನ್ನ ನಡೆದ ಮೊದಲ ಸೆಮೀಸ್‌'ನಲ್ಲಿ ವಿಯೆಟ್ನಾಂನ ತೈನ್ ಮಿಗ್ ಗುಯೆನ್‌ರನ್ನು 21-14, 21-19 ಸೆಟ್'ಗಳ ಅಂತರದಿಂದ ಮಣಿಸುವ ಮೂಲಕ ಪ್ರಣಯ್ ಅಂತಿಮ ಸುತ್ತು ಪ್ರವೇಶಿಸಿದರು.

ಫೈನಲ್‌'ನಲ್ಲಿ ಭಾರತೀಯರಿಬ್ಬರೇ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. ಕಳೆದ ಏಪ್ರಿಲ್'ನಲ್ಲಿ ಸಿಂಗಪೂರ್ ಓಪನ್'ನಲ್ಲಿ ಕೆ. ಶ್ರೀಕಾಂತ್ ಹಾಗೂ ಬಿ. ಸಾಯಿ ಪ್ರಣೀತ್ ಪ್ರಶಸ್ತಿಗಾಗಿ ಕಾದಟ ನಡೆಸಿದ್ದರು, ಈ ಬಾರಿ ಯುಎಸ್ ಓಪನ್'ನಲ್ಲಿ ಕಶ್ಯಪ್ ಹಾಗೂ ಪ್ರಣಯ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.