ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್'ಗಳಾದ ತಿಸಾರ ಪೆರೇರಾ ಹಾಗೂ ಮಿಲಿಂದಾ ಸಿರಿವರ್ಧನ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪಲ್ಲೆಕೆಲೆ(ಆ.16): ಟೀಂ ಇಂಡಿಯಾ ಎದುರು ತವರಿನಲ್ಲೇ ವೈಟ್'ವಾಶ್ ಮುಖಭಂಗ ಅನುಭವಿಸಿರುವ ಶ್ರೀಲಂಕಾ ಇದೀಗ ಏಕದಿನ ಸರಣಿಯಾಡಲು ಸಜ್ಜಾಗಿದೆ.

ಇದೇ ಆಗಸ್ಟ್ 20 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಸೀಮಿತ ಓವರ್‌ಗಳ ಪಂದ್ಯಗಳ ಸರಣಿಗಾಗಿ 15 ಮಂದಿ ಆಟಗಾರರ ಶ್ರೀಲಂಕಾ ತಂಡವನ್ನು ಆಯ್ಕೆಮಾಡಲಾಗಿದೆ.

ಭಾನುವಾರ ದಂಬುಲಾದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಆ್ಯಂಜೆಲೋ ಮ್ಯಾಥ್ಯೂಸ್ ನಾಯಕ ಸ್ಥಾನದಿಂದ ಕೆಳಕ್ಕಿಳಿದ ಬಳಿಕ ಎಡಗೈ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಲಂಕಾತಂಡಕ್ಕೆ ಪೂರ್ಣ ಪ್ರಮಾಣದ ನಾಯಕರಾಗಿ ಮುನ್ನಡೆಸುತ್ತಿರುವ ಮೊದಲ ಏಕದಿನ ಸರಣಿ ಇದಾಗಿದೆ.

ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದ ಆಲ್ರೌಂಡರ್'ಗಳಾದ ತಿಸಾರ ಪೆರೇರಾ ಹಾಗೂ ಮಿಲಿಂದಾ ಸಿರಿವರ್ಧನ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಜುಲೈನಲ್ಲಿ ಆ್ಯಂಜಲೋ ಮ್ಯಾಥ್ಯೂಸ್ ನಾಯಕತ್ವದಲ್ಲಿ ತವರಿನಲ್ಲೇ ನಡೆದ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ 3-2 ಅಂತರದಲ್ಲಿ ಸೋತು ಮುಖಭಂಗ ಅನುಭವಿಸಿತ್ತು.

ಲಂಕಾ ತಂಡ ಹೀಗಿದೆ:

ಉಪುಲ್ ತರಂಗಾ (ನಾಯಕ), ಮ್ಯಾಥ್ಯೂಸ್, ಡಿಕ್‌'ವೆಲ್ಲಾ, ದನುಷ್ಕಾ, ಕುಸಾಲ್, ಚಮರಾ ಕಪುಗೆಡೆರಾ, ಮಿಲಿಂದಾ ಸಿರಿವರ್ಧನ, ಪುಷ್ಪಕುಮಾರ, ಧನಂಜಯ, ಸಂಡಕನ್, ತಿಸಾರ, ವನ್ನಿಡು ಹಸರಂಗ, ಲಸಿತ್ ಮಾಲಿಂಗ, ದುಷ್ಮಾಂತ ಚಮೀರಾ, ಫೆರ್ನಾಂಡೋ.