ದೆಹಲಿ(ಮಾ.30): 12ನೇ ಆವೃತ್ತಿ ಐಪಿಎಲ್ ಟೂರ್ನಿಗೆ ಒಂದಲ್ಲಾ ಒಂದು ವಿವಾದ ಮೆತ್ತಿಕೊಳ್ಳುತ್ತಿದೆ. ಮಕಡಿಂಗ್, ನೋ ಬಾಲ್ ಸೇರಿದಂತೆ ಹಲವು ವಿವಾದ ಈಗಾಗಲೇ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಅಂಪೈರ್ ಮತ್ತೊಂದು ಎಡವಟ್ಟು ಮಾಡಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಒಂದು ಓವರ್‌ನಲ್ಲಿ 7 ಬಾಲ್ ಎಸೆದಿದ್ದಾರೆ.

ಇದನ್ನೂ ಓದಿ: 

ಅಂಪೈರ್ ಇನ್ನೂ ಓವರ್ ಮುಗಿದಿಲ್ಲ, ಇನ್ನೂ ಒಂದು ಬಾಲ್ ಬಾಕಿ ಇದೆ ಅಂತಾ ಹೇಳಿ ಹೇಳಿ ಅಶ್ವಿನ್ 7 ಬಾಲ್ ಎಸೆದಿದ್ದಾರೆ. 6 ಎಸೆತದಲ್ಲಿ 3 ರನ್ ನೀಡಿ ಎಕಾನಾಮಿ ಬೌಲರ್ ಆಗಿ ಗುರುತಿಸಿಕೊಂಡ ಅಶ್ವಿನ್ ಹೆಚ್ಚುವರಿ ಎಸೆತದಲ್ಲಿ ಬೌಂಡರಿ ಚಚ್ಚಿಸಿಕೊಂಡರು. 

ಇದನ್ನೂ ಓದಿ: 

ಆರ್ ಅಶ್ವಿನ್ 7 ಎಸೆತದ ಓವರ್ ವಿವರ:
1ನೇ ಎಸೆತ:  ಯಾವುದೇ ರನ್ ಇಲ್ಲ
2ನೇ ಎಸೆತ: ರೋಹಿತ್ 1 ರನ್ ಕಬಳಿಕೆ 
3ನೇ ಎಸೆತ: ಯಾವುದೇ ರನ್ ಇಲ್ಲ
4ನೇ ಎಸೆತ: ಡಿಕಾಕ್ 1 ರನ್ ಕಬಳಿಕೆ
5ನೇ ಎಸೆತ:  ಯಾವುದೇ ರನ್ ಇಲ್ಲ
6ನೇ ಎಸೆತ: ರೋಹಿತ್ 1 ರನ್ ಕಬಳಿಕೆ 
7ನೇ ಎಸೆತ: ಬೌಂಡರಿ ಸಿಡಿಸಿದ ಡಿಕಾಕ್