ಹೈದರಾಬಾದ್ ಟೆಸ್ಟ್‌ನಲ್ಲಿ 10 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಉಮೇಶ್ ಯಾದವ್ ಇದೀಗ  ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆದರೆ ಶಾರ್ದೂಲ್ ಠಾಕೂರ್ ಬದಲು ಉಮೇಶ್ ಯಾದವ್‌ಗೆ ಸ್ಥಾನ ನೀಡಲಾಗಿದೆ.

ನವದೆಹಲಿ(ಅ.17): ಗಾಯಾಳು ಶಾರ್ದೂಲ್‌ ಠಾಕೂರ್‌ ಬದಲಿಗೆ ವೆಸ್ಟ್‌ಇಂಡೀಸ್‌ ವಿರುದ್ಧ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ, ಭಾರತ ತಂಡದಲ್ಲಿ ಉಮೇಶ್‌ ಯಾದವ್‌ಗೆ ಸ್ಥಾನ ನೀಡಲಾಗಿದೆ. ವಿಂಡೀಸ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ 10 ವಿಕೆಟ್‌ ಕಿತ್ತು ಮಿಂಚಿದ ಉಮೇಶ್‌ಗೆ ಅವಕಾಶ ದೊರೆತಿದೆ. 

ಈ ಮೊದಲು ಪ್ರಕಟಗೊಂಡಿದ್ದ ತಂಡದಲ್ಲಿ ಶಾರ್ದೂಲ್‌ ಸ್ಥಾನ ಪಡೆದಿದ್ದರು. ಆದರೆ ಹೈದರಾಬಾದ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಕಾಲಿಟ್ಡ ಶಾರ್ದೂಲ್‌ ಕೇವಲ 10 ಎಸೆತ ಬೌಲ್‌ ಮಾಡಿ ತೊಡೆ ಸಂದು ಗಾಯಕ್ಕೆ ತುತ್ತಾಗಿದ್ದರು. 

Scroll to load tweet…

ಈ ವರ್ಷ ಜುಲೈನಲ್ಲಿ ಇಂಗ್ಲೆಂಡ್‌ ವಿರುದ್ಧ ಲಾರ್ಡ್ಸ್ನಲ್ಲಿ ನಡೆದಿದ್ದ ಪಂದ್ಯದ ಬಳಿಕ, ಉಮೇಶ್‌ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಅ.21ರಂದು ಗುವಾಹಟಿಯಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.