ಭಾರತ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್‌ಗೆ ಕೊನೆಗೂ ಖಾಯಂ ಉದ್ಯೋಗ ಸಿಕ್ಕಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌'ನ ನಾಗಪುರ ಶಾಖೆಯ ಸಹಾಯಕ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿದೆ. ಉಮೇಶ್‌'ಗೆ ಈ ಮೊದಲು ಏರ್ ಇಂಡಿಯಾದಲ್ಲಿ ಉದ್ಯೋಗ ದೊರಕ್ಕಿತ್ತಾದರೂ ಅದು ಖಾಯಂ ಆಗಿರಲಿಲ್ಲ. ಇದೀಗ ಕ್ರೀಡಾ ಕೋಟಾದಡಿ ಯಾದವ್‌'ಗೆ ಆರ್‌'ಬಿಐನಲ್ಲಿ ಉದ್ಯೋಗ ಲಭಿಸಿದ್ದು, ಸೋಮವಾರ ಕೆಲಸಕ್ಕೆ ಸೇರಿಕೊಂಡರು ಎಂದು ಮೂಲಗಳು ತಿಳಿಸಿವೆ.

ನಾಗ್ಪುರ(ಜು.19): ಭಾರತ ಕ್ರಿಕೆಟ್ ತಂಡದ ವೇಗಿ ಉಮೇಶ್ ಯಾದವ್‌ಗೆ ಕೊನೆಗೂ ಖಾಯಂ ಉದ್ಯೋಗ ಸಿಕ್ಕಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌'ನ ನಾಗಪುರ ಶಾಖೆಯ ಸಹಾಯಕ ವ್ಯವಸ್ಥಾಪಕರನ್ನಾಗಿ ನೇಮಕ ಮಾಡಲಾಗಿದೆ. ಉಮೇಶ್‌'ಗೆ ಈ ಮೊದಲು ಏರ್ ಇಂಡಿಯಾದಲ್ಲಿ ಉದ್ಯೋಗ ದೊರಕ್ಕಿತ್ತಾದರೂ ಅದು ಖಾಯಂ ಆಗಿರಲಿಲ್ಲ. ಇದೀಗ ಕ್ರೀಡಾ ಕೋಟಾದಡಿ ಯಾದವ್‌'ಗೆ ಆರ್‌'ಬಿಐನಲ್ಲಿ ಉದ್ಯೋಗ ಲಭಿಸಿದ್ದು, ಸೋಮವಾರ ಕೆಲಸಕ್ಕೆ ಸೇರಿಕೊಂಡರು ಎಂದು ಮೂಲಗಳು ತಿಳಿಸಿವೆ.

ಬಡತನದಲ್ಲಿ ಬೆಳೆದ ಉಮೇಶ್‌'ಗೆ ಸರ್ಕಾರಿ ಕೆಲಸವೊಂದು ಸಿಗಬೇಕು ಎನ್ನುವುದು ಅವರ ತಂದೆಯ ಕನಸಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಪೇದೆಯಾದರೂ ಸಾಕು, ಜೀವನಕ್ಕೆ ತೊಂದರೆ ಯಿಲ್ಲ ಎಂದು ಅವರ ತಂದೆ ಆಸೆಪಟ್ಟಿದ್ದರು. ‘ಚಾಂಪಿಯನ್ಸ್ ಟ್ರೋಫಿಗೆಂದು ಇಂಗ್ಲೆಂಡ್‌ಗೆ ತೆರಳುವ ಮೊದಲೇ ಉಮೇಶ್ ಅವರೊಂದಿಗೆ ಕೆಲಸದ ಕುರಿತು ಆರ್‌ಬಿಐ ಅಧಿಕಾರಿಗಳು ಮಾತುಕತೆ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.

ಉಮೇಶ್ ಮನೆಯಲ್ಲಿ ಕಳ್ಳತನ:

ಅತ್ತ ಸರ್ಕಾರಿ ನೌಕರಿ ಸಿಕ್ಕ ಸಂತೋಷ ಒಂದೆಡೆಯಾದರೆ, ಉಮೇಶ್ ಯಾದವ್‌ಗೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ಯಾದವ್ ಅವರ ಫ್ಲ್ಯಾಟ್'ನ ಕಿಟಕಿ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ₹45,000 ನಗದು ಹಾಗೂ 2 ಮೊಬೈಲ್ ಫೋನ್‌'ಗಳನ್ನು ಕದ್ದುಕೊಂಡು ಹೋಗಿರುವ ಘಟನೆ ನಡೆದಿದೆ. ಸೋಮವಾರ ರಾತ್ರಿ 7ರಿಂದ 9ರ ಸಮಯದಲ್ಲಿ ಈ ಕಳ್ಳತನ ನಡೆದಿದ್ದು, ಘಟನೆ ನಡೆದಾಗ ಫ್ಲಾಟ್‌'ನಲ್ಲಿ ಯಾರು ಇರಲಿಲ್ಲ. ಮಂಗಳವಾರ ಮಧ್ಯಾಹ್ನ ಕಳ್ಳತನ ಕುರಿತು ನಮಗೆ ಮಾಹಿತಿ ಲಭ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.