ಟಿ20ರಲ್ಲಿ ಬರೋಬ್ಬರಿ 314 ರನ್ ಗಳಿಕೆ, ಯಾರ ವಿರುದ್ಧ? ಯಾವ ದೇಶ?
ಏಕ ದಿನ ಪಂದ್ಯದಲ್ಲೇ 300 ರನ್ ಕ್ರಾಸ್ ಮಾಡುವುದೆಂದರೆ ಸುಲಭದ ವಿಷ್ಯವಲ್ಲ. ಅಕಸ್ಮಾತ್ ಇಷ್ಟು ರನ್ ಸೇರಿಸುವಲ್ಲಿ ಯಶಸ್ವಿಯಾದ ತಂಡವನ್ನು ಚೇಸ್ ಮಾಡುವುದೂ ಸುಲಭವಲ್ಲ. ಅಂಥದಲ್ಲಿ ಈ ತಂಡ ಟಿ20ಯಲ್ಲಿ 314 ರನ್ ಗಳಿಸಿ, ವಿಶ್ವದಾಖಲೆ ನಿರ್ಮಿಸಿದೆ.
ಕಿಗಾಲಿ(ರುವಾಂಡ) (ಜು.21): ಏಕದಿನ ಪಂದ್ಯದಲ್ಲಿಯೂ ಮಾಡಲಾಗದಂಥ ರನ್‌ಗಳನ್ನು ಟಿ20ಯಲ್ಲಿ ಪಂದ್ಯದಲ್ಲಿ ಸೇರಿಸಿ, ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ವಿಶ್ವದಾಖಲೆ ಬರೆದಿದೆ ಉಗಾಂಡಾದ ಮಹಿಳಾ ತಂಡ. ಬರೋಬ್ಬರಿ 304 ರನ್‌ಗಳಲ್ಲಿ ಮಾಲಿ ತಂಡದ ವಿರುದ್ಧ ಪಂದ್ಯ ಗೆಲ್ಲುವ ಮೂಲಕ ಯಾರೂ ಕೇಳರಿಯದ ದಾಖಲೆ ಬರೆದಂತಾಗಿದೆ.
ಟಿ20 ತಂಡದಲ್ಲಿ ಇದೇ ಮೊದಲ ಬಾರಿಗೆ 300 ರನ್ ದಾಖಲಾಗಿದೆ. ಈ ಸಾಧನೆಯನ್ನು ಉಗಾಂಡ ಮಹಿಳಾ ತಂಡ ಮಾಡಿದೆ. ಇಲ್ಲಿ ನಡೆಯುತ್ತಿರುವ ಕ್ವಿಬುಕಾ ಟಿ20 ಟೂರ್ನಿಯಲ್ಲಿ ಗುರುವಾರ ನಡೆದ ಮಾಲಿ ವಿರುದ್ಧದ ಪಂದ್ಯದಲ್ಲಿ ಉಗಾಂಡ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 314 ರನ್ ಗಳಿಸಿತು.
ಮಾಲಿ 11.1 ಓವರ್‌ಗಳಲ್ಲಿ ಕೇವಲ 10 ರನ್‌ಗೆ ಆಲೌಟ್ ಆದ ಕಾರಣ, ಉಗಾಂಡ 304 ರನ್‌ಗಳ ಬೃಹತ್ ಗೆಲುವು ಸಾಧಿಸಿತು. ಪಂದ್ಯದಲ್ಲಿ ಮಾಲಿ ಒಟ್ಟು 61 ಇತರೆ ರನ್ ಸಹ ನೀಡಿತು. ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಇದೊಂದು ದಾಖಲೆ.
ICC World Cup ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಸ್ಕೋರ್ ವಿವರ
ಉಗಾಂಡಾ: 20 ಓವರ್‌ಗಳಲ್ಲಿ 314ಕ್ಕೆ 2 ವಿಕೆಟ್ (ಪಿ ಅಲಕೋ 116, ಆರ್ ಮುಸಮಲೈ 103 (ನಾಟೌಟ್), ಎ ಕೊನ್ 1/59)
ಮಾಲಿ : 11 ಓವರ್‌ನಲ್ಲಿ ಆಲ್‌ಔಟ್. (ಟಿ ಕೊನಟೆ 4, ಎಂ ಅನ್ಯಿಗೋ 3/1, ಎಸ್. ಕಾಕೈ 2/1)
304 ರನ್‌ಗಳಿಂದ ಗೆದ್ದ ಉಗಾಂಡಾ