ಹರಿಯಾಣ ಪರ ವಿಕಾಸ್ ಖಂಡೋಲಾ ಮತ್ತು ವಾಜಿರ್ ಸಿಂಗ್ ಉತ್ತಮ ಆಟವಾಡಿದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ ಮುನ್ನಡೆ ಹೊಂದಿದ್ದ ಹರಿಯಾಣವೇ ಗೆಲುವು ಸಾಧಿಸಬಹುದೆಂಬ ನಿರೀಕ್ಷೆಯನ್ನು ಅನೂಪ್ ಮತ್ತು ಅಡಕೆ ಹುಸಿಗೊಳಿಸಿದರು.

ಹೈದರಾಬಾದ್(ಜುಲೈ 30): ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಎದುರು ಪಲ್ಟಿ ಹೊಡೆದಿದ್ದ ಪ್ರಬಲ ಯು ಮುಂಬಾ ತಂಡ ಪ್ರೊಕಬಡ್ಡಿಯ 5ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ಕಂಡಿದೆ. ಇಂದು ನಡೆದ ಎ ಗುಂಪಿನ ಪಂದ್ಯದಲ್ಲಿ ಹೊಸ ತಂಡವಾದ ಹರಿಯಾಣ ಸ್ಟೀಲರ್ಸ್ ವಿರುದ್ಧ 29-28ರಿಂದ ರೋಚಕ ಜಯ ಪಡೆಯಿತು. ಕಳೆದ ಋತುವಿನವರೆಗೂ ದಬಾಂಗ್ ದಿಲ್ಲಿಯ ಬೆನ್ನೆಲುಬಾಗಿದ್ದ ಕಾಶಿಲಿಂಗ್ ಅಡಕೆ ಈಗ ಮುಂಬೈ ಗೆಲುವಿಗೆ ಪ್ರಮುಖ ಕಾರಣರಾದರು. ಕಾಶಿಲಿಂಗ್ ಅಡಕೆ ಮತ್ತು ಅನೂಪ್ ಕುಮಾರ್ ಅವರ ರೇಡಿಂಗ್'ಗೆ ಹರಿಯಾಣ ತಂಡದ ಡಿಫೆನ್ಸ್ ಅಲುಗಾಡಿತು. ಹರಿಯಾಣ ಪರ ವಿಕಾಸ್ ಖಂಡೋಲಾ ಮತ್ತು ವಾಜಿರ್ ಸಿಂಗ್ ಉತ್ತಮ ಆಟವಾಡಿದರೂ ಗೆಲುವು ದಕ್ಕಿಸಿಕೊಳ್ಳಲಾಗಲಿಲ್ಲ. ಪಂದ್ಯದ ಮೊದಲಾರ್ಧದಲ್ಲಿ ಮುನ್ನಡೆ ಹೊಂದಿದ್ದ ಹರಿಯಾಣವೇ ಗೆಲುವು ಸಾಧಿಸಬಹುದೆಂಬ ನಿರೀಕ್ಷೆಯನ್ನು ಅನೂಪ್ ಮತ್ತು ಅಡಕೆ ಹುಸಿಗೊಳಿಸಿದರು.

ಈ ಗೆಲುವಿನ ಮೂಲಕ ಯು ಮುಂಬಾ ತಂಡ ಪಾಯಿಂಟ್ ಖಾತೆ ತೆರೆಯಿತು.