ರಶೀದ್ ಖಾನ್ ಸ್ಪಿನ್ ಎದುರಿಸಲು ಟೀಮ್ಇಂಡಿಯಾದ ಹೊಸ ತಂತ್ರ ಏನು?

Two young wrist spinners join Team India in the nets ahead of the historic Test
Highlights

ಭಾರತ -ಆಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಗೊಂಡಿದೆ. ಆಫ್ಘಾನಿಸ್ತಾನ ಸ್ಪಿನ್ನರ್‌ಗಳನ್ನ ಎದುರಿಸಲು ಭಾರತ ಹೊಸ ತಂತ್ರ ರೂಪಿಸಿದೆ. ಟೀಮ್ಇಂಡಿಯಾದ ನೂತನ ಪ್ಲಾನ್ ಏನು? ಇಲ್ಲಿದೆ.

ಬೆಂಗಳೂರು(ಜೂನ್.11): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಉಭಯ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ. ಅಫ್ಘಾನ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎದುರಾಗೋ ಸವಾಲುಗಳನ್ನ ಎದುರಿಸಲು ಅಜಿಂಕ್ಯ ರಹಾನೆ ನೇತೃತ್ವದ ಭಾರತ ತಂಡ ಭರ್ಜರಿ ತಯಾರಿ ನಡೆಸುತ್ತಿದೆ.

ಐಪಿಎಲ್ ಹಾಗೂ ಇತ್ತೀಚೆಗಿನ ಟಿ-ಟ್ವೆಂಟಿ ಟೂರ್ನಿಯಲ್ಲಿ ಮಾರಕ ಸ್ಪಿನ್ ದಾಳಿ ನಡೆಸಿ ಎದುರಾಳಿಗಳಿಗೆ ಶಾಕ್ ನೀಡಿರುವ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಎದುರಿಸೋದು ಭಾರತ ತಂಡಕ್ಕಿರೋ ಸವಾಲು. ಇದಕ್ಕಾಗಿ ಭಾರತ ತನ್ನ ಅಭ್ಯಾಸಕ್ಕಾಗಿ ಇಬ್ಬರು ಸ್ಪಿನ್ನರ್‌ಗಳನ್ನ ಸೇರಿಸಿಕೊಂಡಿದೆ. 

ಟೀಮ್ಇಂಡಿಯಾ ನಿಗಧಿತ ಓವರ್‌ ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಿರುವ ಸ್ಪಿನ್ನರ್ ಯಜುವೇಂದ್ರ ಚೆಹಾಲ್ ಹಾಗೂ ಕರ್ನಾಟಕ ಸ್ಪಿನ್ನರ್ ಶಿವಿಲ್ ಕೌಶಿಕ್ ಸದ್ಯ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ನಡೆಸುತ್ತಿದ್ದಾರೆ. ಈ ಮೂಲಕ ಅಫ್ಘಾನ್ ಸ್ಪಿನ್ನರ್‌ಗಳನ್ನ ಎದುರಿಸಲು ರಹಾನೆ ಸೈನ್ಯ ಸಜ್ಜಾಗುತ್ತಿದೆ. ಜೂನ್ 14 ರಿಂದ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ.
 

loader