ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲುತ್ತಿದ್ದಂತೆ, ಟೀಂ ಇಂಡಿಯಾ ವಿರುದ್ಧ ಆಕ್ರೋಶ ಹೆಚ್ಚಾಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ರೋಚ್ಚಿಗೆದ್ದಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
ಸೌತಾಂಪ್ಟನ್(ಸೆ.03): ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದೆ. ಹೀನಾಯ ಬ್ಯಾಟಿಂಗ್ ಪ್ರದರ್ಶನ ನೀಡಿ 60 ರನ್‌ಗಳ ಸೋಲು ಅನುಭವಿಸಿರುವ ಟೀಂ ಇಂಡಿಯಾ ವಿರುದ್ಧ ಇದೀಗ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೌತಾಂಪ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿಗೆ 245 ರನ್ ಗುರಿ ಪಡೆದಿತ್ತು. ಸುಲಭ ಗುರಿಯನ್ನ ಬೆನ್ನಟ್ಟಲು ಟೀಂ ಇಂಡಿಯಾಗೆ ಸಾಧ್ಯವಾಗಿಲ್ಲ. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಹೊರತು ಪಡಿಸಿದರೆ ಸಂಪೂರ್ಣ ತಂಡ ಪೆವಿಲಿಯನ್ ಪರೇಡ್ ನಡೆಸಿ ಟೆಸ್ಟ್ ಸರಣಿ ಸೋತಿತ್ತು. ಟೀಂ ಇಂಡಿಯಾದ ಈ ಪ್ರದರ್ಶನ ನೋಡುವುದಕ್ಕಿಂತ ಲಗಾನ್ ಚಿತ್ರ ನೋಡುವುದೇ ಹಿತವೆನಿಸುತ್ತೆ ಎಂದು ಟ್ವಿಟರಿಗರು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯ ಹಾಗೂ ಸರಣಿಯಲ್ಲಿ ಟೀಂ ಇಂಡಿಯಾ ಪ್ರದರ್ಶನಕ್ಕೆ ಟ್ವಿಟರಿಗರು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಇಲ್ಲಿದೆ ಆಯ್ದ ಪ್ರತಿಕ್ರಿಯೆಗಳು.
