ಆ್ಯಂಟಿಗಾ(ಆ.24): ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದ ನಡುವೆ ನಾಯಕ ವಿರಾಟ್ ಕೊಹ್ಲಿ ಟ್ರೋಲ್ ಆಗಿದ್ದಾರೆ. ಈ ಬಾರಿ ಕೊಹ್ಲಿ ಟ್ರೋಲ್ ಆಗಿರುವುದು ಪುಸ್ತಕ ಓದೋ ಮೂಲಕ. ಭಾರತದ ಇನ್ನಿಂಗ್ಸ್ ವೇಳೆ ಪೆವಿಲಿಯನ್ ಕುಳಿತಿದ್ದ ಕೊಹ್ಲಿ ಡಿಟಾಕ್ಸ್ ಯುರ ಇಗೋ ಅನ್ನೋ ಪುಸ್ತಕ ಓದಿದ್ದಾರೆ. ಇದು ಕ್ಯಾಮರ ಕಣ್ಣಿಗೆ ಬಿದ್ದ ಮರುಕ್ಷಣದಲ್ಲೇ ಕೊಹ್ಲಿ ಟ್ರೋಲ್ ಆಗಿದ್ದಾರೆ. ಕೊಹ್ಲಿ ಇಗೋ ಪುಸ್ತಕ ಓದಬೇಕಾಗಿಲ್ಲ, ಕನ್ನಡಿಯಲ್ಲಿ ಒಮ್ಮೆ ನೋಡಿಕೊಂಡರೆ ಸಾಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.