ಪರ್ತ್(ಡಿ.12): ಆಸ್ಟ್ರೇಲಿಯಾ ವಿರುದ್ದದ 2ನೇ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. ಆಸಿಸ್ ಉತ್ತಮ ಪ್ರದರ್ಶನಕ್ಕೆ ಟೀಂ ಇಂಡಿಯಾ ತಂಡದ ಆಯ್ಕೆಯಲ್ಲಿನ ತಪ್ಪುಗಳೇ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ತಂದೆಯಾಗುತ್ತಿದ್ದಾರಾ ಯುವರಾಜ್ ಸಿಂಗ್ - ಪತ್ನಿ ಹಜೆಲ್ ಹೇಳಿದ್ದೇನು?

ಪರ್ತ್ ಟೆಸ್ಟ್ ಪಂದ್ಯಕ್ಕೆ ಪ್ರಮುಖ ಸ್ಪಿನ್ನರ್‌ಗಳನ್ನ ಆಯ್ಕೆಮಾಡದೇ ನಾಲ್ವರು ವೇಗಿಗಳನ್ನ ಆಯ್ಕೆ ಮಾಡಲಾಗಿದೆ. ಪರ್ತ್‌ನ ಸ್ಪೀಡ್ ಹಾಗೂ ಬೌನ್ಸಿ ಪಿಚ್‌ಗಾಗಿ ಈ ಆಯ್ಕೆ ಮಾಡಲಾಗಿದೆ. ಆದರೆ ವೇಗಿಗಳು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಪಾರ್ಟ್ ಟೈಮ್ ಸ್ಪಿನ್ನರ್ ಹನುಮಾ ವಿಹಾರಿ 2 ವಿಕೆಟ್ ಕಬಳಿಸಿದ್ದಾರೆ. ಇದು ಟ್ವಿಟರಿಗರನ್ನ ಕೆರಳಿಸಿದೆ. ರವೀಂದ್ರ ಜಡೇಜಾಗೆ ಸ್ಥಾನ ನೀಡಬೇಕಿತ್ತು ಅನ್ನೋ ಕೂಗು ಕೇಳಿಬಂದಿದೆ.

ಇದನ್ನೂ ಓದಿ: ಮೋದಿಗೆ ಸಿಕ್ತು ವಿಶೇಷ ಜೆರ್ಸಿ ಗಿಫ್ಟ್