ಮುಂಬೈ(ಡಿ.14):  ಟೀಂ ಇಂಡಿಯಾ ಆಲ್ರೌಂಡರ್ ಯುವರಾಜ್ ಸಿಂಗ್ ಹಾಗೂ ಪತ್ನಿ ಹಜೆಲ್ ಕೀಚ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಇಂತದೊಂದು ಪ್ರಶ್ನೆ ಸಾಮಾಜಿಕ ಜಾಲ ತಾಣ ಸೇರಿದಂತೆ ಎಲ್ಲಡೆ ಹರಿದಾಡುತ್ತಿದೆ. ಇದಕ್ಕೆ ಸ್ವತಃ ಯುವಿ ಪತ್ನಿ ಹಜೆಲ್ ಕೀಚ್ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಸ್ಟಾರ್ ವೇಗಿಗಿಲ್ಲ 2019ರ ಐಪಿಎಲ್ ಆಡೋ ಅವಕಾಶ

ಪ್ರತಿ ಭಾರಿ ನನ್ನ ತೂಕ ಹೆಚ್ಚಾದಾಗ ಮಾಧ್ಯಮಗಳಿಂದ ಮಗುವಿನ ನಿರೀಕ್ಷೆಯಲ್ಲಿದ್ದೀರಾ ಅನ್ನೋ ಪ್ರಶ್ನೆ ಎದುರಿಸುತ್ತೇನೆ. ಇದು ನನಗೆ ಇರಿಸುಮುರಿಸು ತಂದಿದೆ. ಯಾವುದೇ ಸಂತಸ ವಿಚಾರವಿದ್ದರೆ ನಾವೇ ತಿಳಿಸುತ್ತೇವೆ ಎಂದು ಹಜೆಲ್ ಕೀಚ್ ಊಹಾಪೋಹಳಿಗೆ ತೆರೆಎಳೆದಿದ್ದಾರೆ.

ಇದನ್ನೂ ಓದಿ: ಪರ್ತ್ ಟೆಸ್ಟ್: ಸ್ಪಿನ್ನರ್ ಕಣಕ್ಕಿಳಿಸದೇ ಎಡವಟ್ಟು ಮಾಡಿತಾ ಭಾರತ?

2016ರ ನವೆಂಬರ್‌ನಲ್ಲಿ ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಟೀಂ ಇಂಡಿಯಾದಿಂದ ದೂರ ಉಳಿದಿರುವ ಯುವರಾಜ್ ಸಿಂಗ್, ದೇಸಿ ಟೂರ್ನಿಗೆ ಸಿಮೀತಗೊಂಡಿದ್ದಾರೆ.
ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡ್ತಾರ ಗಂಭೀರ್-ಸೀಕ್ರೆಟ್ ಬಹಿರಂಗ!