ಈ ಎಲ್ಲಾ ಬೆಳವಣಿಗೆಗಳ ಬಳಿಕ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕೊಹ್ಲಿಯ ಈ ಹಠಮಾರಿತನಕ್ಕೆ ಟ್ವಿಟರಿಗರು ಕೊಹ್ಲಿಯನ್ನು ಕುಟುಕಿದ್ದು ಹೀಗೆ...
ಬೆಂಗಳೂರು(ಜೂ.21): ಟೀಂ ಇಂಡಿಯಾ ಮುಖ್ಯ ಕೋಚ್ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಬಿಸಿಸಿಐ ಪ್ರಕಟಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಕೊಹ್ಲಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೆಲದಿನಗಳ ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಹೀಗಾಗಿ ಕೊಹ್ಲಿಯೊಂದಿಗೆ ಸಚಿನ್ , ಲಕ್ಷ್ಮಣ್ ಮತ್ತು ಗಂಗೂಲಿಯವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಸಂಧಾನ ಮಾಡಲು ಪ್ರಯತ್ನಿಸಿ ವಿಫಲವಾಗಿದೆ. ಸಲಹಾ ಸಮಿತಿಯ ಎದುರು ಕುಂಬ್ಳೆ ಕೋಚ್ ಆಗಿ ಮುಂದುವರೆಯುವುದು ತಮಗೆ ಇಷ್ಟವಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಬಳಿಕ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಕೊಹ್ಲಿಯ ಈ ಹಠಮಾರಿತನಕ್ಕೆ ಟ್ವಿಟರಿಗರು ಕೊಹ್ಲಿಯನ್ನು ಕುಟುಕಿದ್ದು ಹೀಗೆ...