ಸೌತಾಂಪ್ಟನ್[ಆ.30]: ಜಸ್ಪ್ರೀತ್ ಬುಮ್ರಾ ಹಾಗೂ ನೋ ಬಾಲ್’ಗೂ ಬಿಟ್ಟಿರಲಾರದ ಸಂಬಂಧ ಎಂಬಂತಾಗಿದೆ. ನೋ ಬಾಲ್ ಹಾಕಿ ವಿಕೆಟ್ ಪಡೆದು ಸಂಭ್ರಮಿಸಿ ಆ ಬಳಿಕ ನಿರಾಸೆ ಅನುಭವಿಸಿದ ಕ್ಷಣಗಳನ್ನು ನೀವು ಹಲವು ಬಾರಿ ನೋಡಿದ್ದೀರ. ಈಗ ಅಂತಹದ್ದೇ ನಾಲ್ಕನೇ ಟೆಸ್ಟ್’ನ ಮೊದಲ ದಿನವೇ ಮರುಕಳಿಸಿದೆ.

ಹೌದು, ಭಾರತ-ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್’ನ ಆರಂಭದಲ್ಲೇ ವಿಕೆಟ್ ಪಡೆದು ಮಿಂಚಿದ ಬುಮ್ರಾ, ಆ ಬಳಿಕ ಮತ್ತೊಂದು ವಿಕೆಟ್ ಪಡೆಯುವ ಅವಕಾಶವಿತ್ತು. ಇಂಗ್ಲೆಂಡ್ ನಾಯಕ ಜೋ ರೂಟ್ ಅವರನ್ನು ಎಲ್’ಬಿ ಬಲೆಗೆ ಕೆಡವಿದರು. ಆದರೆ ಅಂಪೈರ್ ನಾಟೌಟ್ ನೀಡಿದಾಗ ಕೊಹ್ಲಿ ರಿವಿವ್ಯೂ ಬಳಸಿದರು. ಆ ಬಳಿಕ ತೀರ್ಪು ಮರುಪರಿಶೀಲಿಸಿದಾಗ ಆ ಎಸೆತ ನೋ ಬಾಲ್ ಆಗಿತ್ತು. 

ಬುಮ್ರಾ ನೋ ಬಾಲ್ ಹಾಕಿದ್ದನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದು ಹೀಗೆ..