ಬೆಂಗಳೂರು[ಆ.22]: ಇಂಗ್ಲೆಂಡ್’ವನ್ನು 200ಕ್ಕೂ ಹೆಚ್ಚು ರನ್’ಗಳಿಂದ ಮಣಿಸಿ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದೆ. ಮೊದಲೆರಡು ಪಂದ್ಯ ಸೋತು ಕಂಗಾಲಾಗಿದ್ದ ಭಾರತ ಇದೀಗ ಈ ಪಂದ್ಯವನ್ನು ಜಯಿಸುವ ಮೂಲಕ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ವಿರಾಟ್ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಅಮೋಘ ಆಲ್ರೌಂಡ್ ಪ್ರದರ್ಶನ ಜತೆಗೆ ತಂಡದ ಸಂಘಟಿತ ಪ್ರದರ್ಶನ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಲಾರ್ಡ್ಸ್ ಟೆಸ್ಟ್’ನಲ್ಲಿ ಹೀನಾಯ ಸೋಲು ಕಂಡಾಗ ಕೆಂಡಕಾರಿದ್ದ ಕೆಲ ಮಾಜಿ ಕ್ರಿಕೆಟಿಗರು ಇಂದಿನ ಟೀಂ ಇಂಡಿಯಾದ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಟ್ವಿಟರಿಗರು ಟೀಂ ಇಂಡಿಯಾ ಗೆಲುವನ್ನು ಕೊಂಡಾಡಿದ್ದು ಹೀಗೆ...