ಇಂಗ್ಲೆಂಡ್ ಪ್ರವಾಸದ ಅಭ್ಯಾಸ ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಡ್ಯಾನ್ಸ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಹಾಗೂ ಧವನ್ ಪಂಜಾಬ್ ಡ್ಯಾನ್ಸ್ ಹೇಗಿತ್ತು? ಇಲ್ಲಿದೆ ವಿವರ
ಲಂಡನ್(ಜು.30): ಟೀಂ ಇಂಡಿಯಾ ಕ್ರಿಕೆಟಿಗರು ಕ್ರಿಕೆಟ್ ಜೊತೆಗೆ ಡ್ಯಾನ್ಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವೇದಿಕೆ ಸಿಕ್ಕಿದರೆ ಸಾಕು, ಒಂದರೆಡು ಸ್ಟೆಪ್ ಹಾಕಿಬಿಡುತ್ತಾರೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಪಂಜಾಬಿ ಡ್ಯಾನ್ಸ್ ಭಾರಿ ಸದ್ದು ಮಾಡುತ್ತಿದೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇತ್ತೀಚೆಗೆ ಎಸೆಕ್ಸ್ ತಂಡದ ವಿರುದ್ಧ ಅಭ್ಯಾಸ ಪಂದ್ಯವಾಡಿತ್ತು. ಪಂಜಾಬಿ ಬಾಂಗ್ಡಾ ಬ್ಯಾಂಡ್ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗರನ್ನ ಮೈದಾನಕ್ಕೆ ಸ್ವಾಗತಿಸಿಲಾಗಿತ್ತು. ಇದೇ ವೇಳೆ ಈ ಬ್ಯಾಂಡ್ ಸದ್ದಿಗೆ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಪಂಜಾಬಿ ಡ್ಯಾನ್ಸ್ ಮಾಡಿದ್ದಾರೆ.
ಫೀಲ್ಡಿಂಗ್ ಇಳಿಯುವ ಸಂದರ್ಭದಲ್ಲಿ ಕೊಹ್ಲಿ ಹಾಗೂ ಧವನ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಇವರಿಬ್ಬರ ಡ್ಯಾನ್ಸ್ ಪರ್ಫಾಮೆನ್ಸ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂಜಾಬಿ ಡ್ಯಾನ್ಸ್ ಮಾಡಿರೋ ಕೊಹ್ಲಿ ಹಾಗೂ ಧವನ್‌ಗೆ ಅಭಿನಂದನೆಗಳು ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
