ಕನ್ನಡಿಗ ಅನಿಲ್ ಕುಂಬ್ಳೆ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡಿಗನ ಹುಟ್ಟುಹಬ್ಬಕ್ಕೆ ದೆಹಲಿಯ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಟ್ವಿಟ್ಟರ್'ನಲ್ಲಿ ವಿನೂತನವಾಗಿ ಶುಭಕೋರಿದ್ದಾರೆ.
ನವದೆಹಲಿ(ಅ.17): ಭಾರತದ ಕೋಚ್, ಕನ್ನಡಿಗ ಅನಿಲ್ ಕುಂಬ್ಳೆ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕನ್ನಡಿಗನ ಹುಟ್ಟುಹಬ್ಬಕ್ಕೆ ದೆಹಲಿಯ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಟ್ವಿಟ್ಟರ್'ನಲ್ಲಿ ವಿನೂತನವಾಗಿ ಶುಭಕೋರಿದ್ದಾರೆ.
ತಮ್ಮ 140 ಅಕ್ಷರಗಳ ಟ್ವಿಟ್ಟರ್'ಅನ್ನು ಯಶಸ್ವಿಯಾಗಿ ಬಳಸಿಕೊಳ್ಳುವ ಸೆಹ್ವಾಗ್ ತನ್ನ ಸಹ ಆಟಗಾರನ ಹುಟ್ಟುಹಬ್ಬಕ್ಕೆ ಶುಭಕೋರಿದ್ದು ಹೀಗೆ...
ಭಾರತ ತಂಡದ ಕೋಚ್ ಆಗಿ ಆಯ್ಕೆಯಾದ ನಂತರ ಅನಿಲ್ ಕುಂಬ್ಳೆ, ಸೆಹ್ವಾಗ್ ಮಾಡುವ ಟ್ವಿಟ್ಟರ್ ಕೌಶಲವನ್ನು ಕೊಂಡಾಡಿದ್ದು ಮಾತ್ರವಲ್ಲದೇ ಟೆಸ್ಟ್ ಕ್ರಿಕೆಟ್ ಪುನರುಜ್ಜೀವನ ನೀಡಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಸೆಹ್ವಾಗ್ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದರು
