ಸರಿಸುಮಾರು ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಬಿದ್ದಿರುವ ರೈನಾ, ರಣಜಿ ಟ್ರೋಫಿಯಲ್ಲೂ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. 5 ರಣಜಿ ಪಂದ್ಯದಲ್ಲಿ ಕೇವಲ 105 ರನ್ ಬಾರಿಸಿದ್ದಾರೆ. ಆದರೆ ಬಂಗಾಳ ತಂಡದ ವಿರುದ್ಧ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಫಾರ್ಮ್'ಗೆ ಮರಳಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಸುರೇಶ್ ರೈನಾ ಭರ್ಜರಿಯಾಗಿ ಫಾರ್ಮ್'ಗೆ ಮರಳಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಬಂಗಾಳ ತಂಡದ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ.
ಸರಿಸುಮಾರು ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಬಿದ್ದಿರುವ ರೈನಾ, ರಣಜಿ ಟ್ರೋಫಿಯಲ್ಲೂ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. 5 ರಣಜಿ ಪಂದ್ಯದಲ್ಲಿ ಕೇವಲ 105 ರನ್ ಬಾರಿಸಿದ್ದಾರೆ. ಆದರೆ ಬಂಗಾಳ ತಂಡದ ವಿರುದ್ಧ ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಫಾರ್ಮ್'ಗೆ ಮರಳಿದ್ದಾರೆ.
ರೈನಾರ ಭರ್ಜರಿ ಶತಕದ ನೆರವಿನಿಂದ ಉತ್ತರಪ್ರದೇಶ 20 ಓವರ್'ಗಳಲ್ಲಿ 3 ವಿಕೆಟ್ ನಷ್ಟಕ್ಕೆ 235 ರನ್ ಕಲೆಹಾಕಿತ್ತು. ರೈನಾ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...