ಬೆನ್ ಸ್ಟೋಕ್ಸ್ ಆಟದ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...
ಬೆನ್ ಸ್ಟೋಕ್ಸ್ ಐಪಿಎಲ್ 10ನೇ ಆವೃತ್ತಿಯಲ್ಲಿ ಅತಿಹೆಚ್ಚು ಬೆಲೆಗೆ ಹರಾಜಾದ ಆಟಗಾರ. ಅಷ್ಟಕ್ಕೂ ಬೆನ್ ಸ್ಟೋಕ್ಸ್'ಗೆ ಪುಣೆ ಪ್ರಾಂಚೈಸಿ ಯಾಕೆ 14.5 ಕೋಟಿ ರೂಪಾಯಿ ಕೊಟ್ಟು ಖರೀದಿಸಿತು ಎಂದು ಕೆಲವರು ಕೇಳುತ್ತಿದ್ದ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ಹೌದು ಗುಜರಾತ್ ಲಯನ್ಸ್ ನೀಡಿದ್ದ 162ರನ್'ಗಳನ್ನು ಬೆನ್ನತ್ತಿದ್ದ ರೈಸಿಂಗ್ ಪುಣೆ ಸೂಪರ್'ಜೈಂಟ್ ತಂಡ ಕೇವಲ 10ರನ್'ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನೇನು ಪುಣೆ ಸೋಲೋದು ಗ್ಯಾರಂಟಿ ಎನ್ನುವಾಗ ಬ್ಯಾಟಿಂಗ್'ಗಿಳಿದಿದ್ದು ಬೆನ್ ಸ್ಟೋಕ್ಸ್...
ಕೇವಲ 63 ಎಸೆತಗಳಲ್ಲಿ ಶತಕ ಸಿಡಿಸಿದ್ದು ಮಾತ್ರವಲ್ಲದೆ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು.
ಬೆನ್ ಸ್ಟೋಕ್ಸ್ ಆಟದ ಬಗ್ಗೆ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ...
