Asianet Suvarna News Asianet Suvarna News

ಪಾಕ್ ವಿರುದ್ಧ ಧೋನಿ ರಿವ್ಯೂವ್-ಟ್ವಿಟರ್‌ ಪ್ರತಿಕ್ರಿಯೆ ಹೇಗಿತ್ತು?

ಪಾಕಿಸ್ತಾನ ವಿರುದ್ಧವೂ ಎಂ.ಎಸ್ ಧೋನಿಯ ರಿವ್ಯೂವ್ ಸಿಸ್ಟಮ್ ನಿರ್ಧಾರ ಪಕ್ಕ ಆಗಿದೆ. ಧೋನಿ ಡಿಆರ್‌ಎಸ್ ಕೇಳಿದರೆ ಬ್ಯಾಟ್ಸ್‌ಮನ್ ಅಂಪೈರ್ ನಿರ್ಧಾರಕ್ಕೆ ಕಾಯಬೇಕಿಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇಲ್ಲಿದೆ ಧೋನಿ ರಿವ್ಯೂವ್ ಸಿಸ್ಟಮ್ ವಿವರ.

Twitter delighted as Dhoni Review System gives India an early breakthrough
Author
Bengaluru, First Published Sep 23, 2018, 8:39 PM IST

ದುಬೈ(ಸೆ.23): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತಕ್ಕೆ ಆರಂಭಿಕ ಮೇಲುಗೈ ನೀಡಿದ್ದು ಎಂ.ಎಸ್ ಧೋನಿ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಫಕರ್ ಜಮಾನ್ ಹಾಗೂ ಇಮಾಮ್ ಉಲ್ ಹಕ್ ಉತ್ತಮ ಆರಂಭ ನೀಡೋ ಸೂಚನೆ ನೀಡಿದ್ದರು.

ಯುಜುವೇಂದ್ರ ಚೆಹಾಲ್ ಎಸೆತದಲ್ಲಿ ಇಮಾಮ್ ಉಲ್ ಹಕ್ ಎಲ್‌ಬಿ ಬಲೆಗೆ ಬಿದ್ದರು. ಆದರೆ ಅಂಪೈರ್ ತೀರ್ಮಾನ ನಾಟ್ ಔಟ್. ತಕ್ಷಣವೇ ಧೋನಿ ಡಿಆರ್‌ಎಸ್ ಪಡೆಯುವಂತೆ ರೋಹಿತ್‌ಗೆ ಸೂಚಿಸಿದರು. 

ಧೋನಿ ಡಿಆರ್‌ಎಸ್ ಯಾವುತ್ತೂ ತಪ್ಪಾಗಿಲ್ಲ. ಪಾಕಿಸ್ತಾನ ವಿರುದ್ಧವೂ ಇದು ಸಾಬೀತಾಯಿತು. ಡಿಆರ್‌ಎಸ್‌ನಿಂದ ಧೋನಿ ನಿರ್ಧಾರ ಸರಿಯಾಗಿತ್ತು. ಹೀಗಾಗಿ ಅಂಪೈರ್ ಔಟ್ ತೀರ್ಮಾನ ನೀಡಿದರು.

ಧೋನಿಯ ಡಿಆರ್‌ಎಸ್ ನಿರ್ಧಾರಕ್ಕೆ ಟ್ವಿಟರ್‌ನಲ್ಲಿ ಮೆಚ್ಟುಗೆ ವ್ಯಕ್ತವಾಗಿದೆ. ಇಷ್ಟೇ ಅಲ್ಲ ಡಿಆರ್‌ಎಸ್ ಎಂದರೆ ಡಿಸಿಶನ್ ರಿವ್ಯೂಸ್ ಸಿಸ್ಟಮ್ ಅಲ್ಲ, ಬದಲಾಗಿದೆ ಧೋನಿ ರಿವ್ಯೂವ್ ಸಿಸ್ಟಮ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

 

 

 

 

 

 

 

 

 

Follow Us:
Download App:
  • android
  • ios