ಮುಂಬೈ(ಆ.23): ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಿಡುವಿನ ವೇಳೆಯಲ್ಲೂ ಫುಲ್ ಬ್ಯುಸಿಯಾಗಿದ್ದಾರೆ. ಇದೀಗ ಖಾಸಗಿ ಬ್ರ್ಯಾಂಡ್ ಪ್ರಮೋಶನ್‌ಗಾಗಿ ಹಾರ್ದಿಕ್ ಪಾಂಡ್ಯ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಡ್ರೆಸ್ ಧರಿಸಿದ ಪಾಂಡ್ಯ, ಅಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 

ಇದನ್ನೂ ಓದಿ: ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ!

ಹಾರ್ದಿಕ್ ಪಾಂಡ್ಯ ಹೊಸ ಲುಕ್ ಹಾಗೂ ರ‍್ಯಾಂಪ್ ವಾಕ್‌ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಈ ರೀತಿ ಡ್ರೆಸ್ ಮಾಡಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿರೋದು ಇದೀಗ ಟ್ರೋಲ್ ಆಗಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಸೇರಿಕೊಂಡ ಮೇಲೆ ಹಾರ್ದಿಕ್ ಪಾಂಡ್ಯ ಕೂಡ ಈ ರೀತಿ ಡ್ರೆಸ್ ಮಾಡುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನ ರಣವೀರ್ ಸಿಂಗ್ ಎಂದು ಕೆಲವರು ಹೇಳಿದ್ದಾರೆ.