ನೆರೆ ಪರಿಹಾರಕ್ಕೆ TVS ಮೋಟಾರ್ಸ್ 1 ಕೋಟಿ ರೂ ಪರಿಹಾರ!

ಕರ್ನಾಟಕ ನೆರೆ ಪರಿಹಾರ ಕಾರ್ಯಕ್ಕೆ ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು ಕೈಜೋಡಿಸುತ್ತಿವೆ. ಇದೀಗ  TVS ಮೋಟಾರ್ಸ್ ನೆರೆ ಸಂತ್ರಸ್ತರಿಗೆ ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ನೆರೆ ಪರಿಹಾರ ಕಾರ್ಯಕ್ಕೆ  TVS ಮೋಟಾರ್ಸ್ 1 ಕೋಟಿ ರೂಪಾಯಿ ನೀಡಿದೆ.
 

Tvs motors Donate 1 Crore For Flood Relief In Karnataka

ಬೆಂಗಳೂರು(ಆ.22): ದೇಶದ ವಿವಿಧ ರಾಜ್ಯಗಳು ರಣಭೀಕರ ಮಳೆ ಹಾಗೂ ಪ್ರವಾಹಕ್ಕೆ ತತ್ತರಿಸಿದೆ. ಅದರಲ್ಲೂ ಕರ್ನಾಟಕದ ಬಹುತೇಕ ಭಾಗ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಉತ್ತರ ಕರ್ನಾಟಕ, ಕರಾವಳಿ, ಕೊಡಗು ಸೇರಿದಂತೆ ಕರುನಾಡು ಪ್ರವಾಹಕ್ಕೆ ನಲುಗಿದೆ. ಸದ್ಯ ಕೆಲೆವೆಡೆ ಮಳೆ ನಿಂತಿದ್ದು ಪರಿಹಾರ ಕಾರ್ಯ ನಡೆಯುತ್ತಿದೆ. ರಾಜ್ಯದ ಹಲವು ಧಾರ್ಮಿಕ ಕೇಂದ್ರಗಳು, ಸಂಘ ಸಂಸ್ಥೆಗಳು ಪರಿಹಾರ ಕಾರ್ಯಕ್ಕೆ ಕೈಜೋಡಿಸಿದೆ. ಇದೀಗ TVS ಮೋಟಾರ್ಸ್ ಕೂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ಬರೋಬ್ಬರಿ 1 ಕೋಟಿ ರೂಪಾಯಿ ನೆರವು ನೀಡಿದೆ.

ಇದನ್ನೂ ಓದಿ: ಇನ್ಮುಂದೆ ಎಥೆನಾಲ್ ಬೈಕ್; ಪೆಟ್ರೋಲ್ ದ್ವಿಚಕ್ರ ವಾಹನಕ್ಕೆ ಗುಡ್‌ಬೈ!

ಕರ್ನಾಟಕದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ಸ್ ಗಣನೀಯ ಪಾಲು ಹೊಂದಿದೆ. TVS ಅಪಾಚೆ, TVS ಸ್ಟಾರ್ ಸಿಟಿ, TVS nಟಾರ್ಕ್, TVS ಜುಪಿಟರ್ ಸೇರಿದಂತೆ ಹಲವು ಬೈಕ್ ಹಾಗೂ ಸ್ಕೂಟರ್ ಕರ್ನಾಟಕದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಟಿವಿಎಸ್, ನೆರೆ ಪರಿಹಾರ ಕಾರ್ಯಕ್ಕೆ 1 ಕೋಟಿ ರೂಪಾಯಿ ನೀಡಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಟಿವಿಎಸ್ ಮೋಟಾರ್ಸ್ ಕಂಪನಿ ಉಪಾಧ್ಯಕ್ಷ ಕರುಣಾಕರ್ ರೆಡ್ಡಿ 1 ಕೋಟಿ ರೂಪಾಯಿ ಚೆಕ್ ನೀಡಿದರು.

 

ಇದನ್ನೂ ಓದಿ: ಹೊಸ ಅವತಾರದಲ್ಲಿ TVS Nಟಾರ್ಕ್ 125 ಸ್ಕೂಟರ್ ಬಿಡುಗಡೆ!

ಕಳೆದ ವರ್ಷ ಕೊಡಗು ಮಳೆಗೆ ತತ್ತರಿಸಿತ್ತು. ಆದರೆ ಈ ಬಾರಿ ಸಂಪೂರ್ಣ ಕರ್ನಾಟಕವೇ ಮುಳುಗಿದೆ. 10 ಸಾವಿರ ಕೋಟಿಗೂ ಹೆಚ್ಚು ಹಾನಿಯಾಗಿದೆ. ಸದ್ಯ ದಾನಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡುತ್ತಿದ್ದಾರೆ. ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ 25 ಕೋಟಿ ರೂಪಾಯಿ ನೀಡಿದ್ದರು. ಇನ್ಫೋಸಿಸ್ ಫೌಂಡೇಶನ್‌ನಿಂದ ಸುಧಾ ಮೂರ್ತಿ 1 ಕೋಟಿ ರೂಪಾಯಿ ನೆರವು ನೀಡಿದ್ದರು. ಟಿವಿಎಸ್ ಕೂಡ ನೆರೆ ಪರಿಹಾರ ಕಾರ್ಯಕ್ಕೆ ಕೈಜೋಡಿಸಿರುವುದು, ಆತಂಕದಲ್ಲಿ ದಿನದೂಡುತ್ತಿರುವ ಮಂದಿಗೆ ಕೊಚ್ಚ ನೆಮ್ಮೆದಿ ತಂದಿದೆ.

Latest Videos
Follow Us:
Download App:
  • android
  • ios