ಮೆಲ್ಬರ್ನ್(ಜ.29): ಪ್ರತಿಷ್ಠಿತ ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಂ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಫೆಲ್ ನಡಾಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಸರ್ಬಿಯಾದ ನೋವಾಕ್ ಜೋಕೋವಿಚ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಗೆಲುವಿನ ಬಳಿಕ ಕ್ರೀಡಾಂಗಣದಿಂದ ತೆರಳುವ ವೇಳೆ ಅಭಿಮಾನಿಗೆ ಆಟ್ರೋಗ್ರಾಫ್ ನೀಡಿರುವುದು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ರಾಫೆಲ್ ನಡಾಲ್ ಮಣಿಸಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಆದ ಜೊಕೊವಿಚ್!

ಜೋಕೋವಿಚ್ ಆಟೋಗ್ರಾಫ್‌ಗಾಗಿ ಅಭಿಮಾನಿಯೊರ್ವ ಗೋಡೆ ಹತ್ತಿ ನಿಂತಿದ್ದ. ಜೋಕೋ ಹತ್ತಿರ ಬರುತ್ತಿದ್ದಂತೆ ಆಟೋಗ್ರಾಫ್‌ಗಾಗಿ ಕೇಳಿದ್ದಾನೆ. ಆದರೆ ಅಭಿಮಾನಿಗಳ ಬಳಿ ಆಟೋಗ್ರಾಫ್ ಪಡೆಯಲು ಪೇಪರ್ ಆಗಲಿ, ಪುಸ್ತಕವಾಗಲಿ ಯಾವುದೂ ಇರಲಿಲ್ಲ. ಎರಡು ಹೆಜ್ಜೆ ಮುಂದೆ ಹೋದ ಜೋಕೋವಿಚ್ ತಕ್ಷಣವೇ ನಿಂತು ತನ್ನ ಜಾಕೆಟ್ ಮೇಲೆ ಸಹಿ ಹಾಕಿ ಆ ಜಾಕೆಟನ್ನ ಅಭಿಮಾನಿಗೆ ನೀಡಿದರು.

 

 

ಇದನ್ನೂ ಓದಿ: ರಣಜಿ ವಿವಾದ: ಚೇತೇಶ್ವರ್ ಪೂಜಾರ ಸಮರ್ಥಿಕೊಂಡ ಕೋಚ್!

ಜೋಕೋವಿಚ್ ಕಾರ್ಯಕ್ಕೆ ಇದೀಗ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜಗತ್ತಿನಲ್ಲಿ ಅತ್ಯಂತ ಅದೃಷ್ಟದ ವ್ಯಕ್ತಿ ಎಂದರೆ ಜೋಕೋ ಜಾಕೆಟ್ ಪಡೆದ ಅಭಿಮಾನಿ ಎಂದು ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಚಾಂಪಿಯನ್ ಜೋಕೋ ಅತ್ಯಂತ ಸರಳ ವ್ಯಕ್ತಿತ್ವ ಎಂದು ಪ್ರಶಂಸಿದ್ದಾರೆ.