ಹರಾರೆ(ಜು.06): ಜಿಂಬಾಬ್ವೆ ವಿರುದ್ಧ ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್‌ಗಳ ಪ್ರಯಾಸದ ಗೆಲುವು ದಾಖಲಿಸಿ ನಿಟ್ಟುಸಿರುಬಟ್ಟಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಜಿಂಬಾಬ್ವೆ ನಿಗಧಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿತು. ಸೊಲಮನ್ ಮಿರೆ 63 ಹಾಗೂ ಪೀಟರ್ ಮೂರ್ 30 ರನ್‌ಗಳ ಕಾಣಿಕೆ ನೀಡಿದರು. ನಾಯಕ ಹ್ಯಾಮಿಲ್ಟನ್ ಮಸಕಡ್ಜಾ, ಎಲ್ಟನ್ ಚಿಗುಂಬುರ ಸೇರಿದಂತೆ ಜಿಂಬಾಬ್ವೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಿಲ್ಲ.

152 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲೇ ಆರೋನ್ ಫಿಂಚ್ ವಿಕೆಟ್ ಕಳೆದುಕೊಂಡಿತು. ಅಲೆಕ್ಸ್ ಕ್ಯಾರೆ 16 ರನ್ ಸಿಡಿಸಿ ಔಟಾದರು. ಆದರೆ ಟ್ರಾವಿಸ್ ಹೆಡ್ 48 ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 56 ರನ್‌ಗಳ ಕಾಣಿಕೆ ನೀಡೋ ಮೂಲಕ ಚೇತರಿಸಿಕೊಂಡಿತು. ಆದರೆ ದಿಢೀರ್ 3 ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ಆತಂಕ ಎದುರಿಸಿತು.

ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 6 ರನ್‌ಗಳ ಅವಶ್ಯಕತೆ ಇತ್ತು. ಆಸಿಸ್ ಬಳಿ ಇನ್ನು 5 ವಿಕೆಟ್ ಇದ್ದ ಕಾರಣ ಸುಲಭವಾಗಿ ಗುರಿ ತಲುಪಿತು. ಆದರೆ ಅಂತಿಮ ಹಂತದಲ್ಲಿ ಜಿಂಬಾಬ್ವೆ ಎದುರು ಆಸ್ಟ್ರೇಲಿಯಾ ಆತಂಕದ ವಾತಾವರಣ ಎದುರಿಸಿತ್ತು.

 ತ್ರಿಕೋನ ಟಿ20 ಸರಣಿಯ ಅಂತಿಮ ಲೀಗ್ ಪಂದ್ಯಕ್ಕೂ ಮೊದಲೇ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಫೈನಲ್ ಪ್ರವೇಶಿತ್ತು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.