ಪಾಕಿಸ್ತಾನ ಒಂದು ಹಂತದಲ್ಲಿ 32 ರನ್'ಗಳಿಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಈ ವೇಳೆ ಬಾಲಂಗೋಚಿಗಳಾದ ಮೊಹಮ್ಮದ್ ಅಮಿರ್ (14) ಹಾಗೂ ರುಮಾನ್ ರಯೀಸ್(16) ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಡುನೆಡಿನ್(ಜ.13): ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ 183 ರನ್'ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ ನ್ಯೂಜಿಲೆಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೆರಡು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್, ನಾಯಕ ಕೇನ್ ವಿಲಿಯಮ್ಸನ್ (73 ರನ್) ಹಾಗೂ ರಾಸ್ ಟೇಲರ್ (52 ರನ್)ರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌'ಗಳಲ್ಲಿ 257 ರನ್ ಗಳಿಸಿತು.

ಈ ಸವಾಲಿನ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಬೌಲ್ಟ್ ಮಾರಕವಾಗಿ ಪರಿಣಮಿಸಿದರು. ಬೌಲ್ಟ್ ಎಸೆದ ಮೊದಲ ಓವರ್'ನ ಕೊನೆಯ ಎಸೆತದಲ್ಲೇ ಅಜರ್ ಅಲಿಗೆ ಪೆವಿಲಿಯನ್ ಹಾದಿ ತೋರಿಸುವ ಮೂಲಕ ಬೌಲ್ಟ್ ಪಾಕ್'ಗೆ ಆಘಾತ ನೀಡಿದರು. ಪಾಕಿಸ್ತಾನ ಒಂದು ಹಂತದಲ್ಲಿ 32 ರನ್'ಗಳಿಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿ ತಲುಪಿತ್ತು. ಈ ವೇಳೆ ಬಾಲಂಗೋಚಿಗಳಾದ ಮೊಹಮ್ಮದ್ ಅಮಿರ್ (14) ಹಾಗೂ ರುಮಾನ್ ರಯೀಸ್(16) ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 50ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ನ್ಯೂಜಿಲೆಂಡ್ ಪರ ಕೇವಲ 17 ರನ್ ನೀಡಿ 5 ವಿಕೆಟ್ ಪಡೆದ ಟ್ರೆಂಟ್ ಬೋಲ್ಟ್ ಗೆಲುವಿನ ರುವಾರಿಯೆನಿಸಿದರು. ಇವರಿಗೆ ಕಾಲಿನ್ ಮನ್ರೋ ಹಾಗೂ ಲೂಕಿ ಫರ್ಗ್ಯುಸನ್ ತಲಾ 2 ವಿಕೆಟ್ ಪಡೆದು ಬೌಲ್ಟ್'ಗೆ ತಕ್ಕ ಸಾಥ್ ನೀಡಿದರು.

ಸಂಕ್ಷಿಪ್ತ ಸ್ಕೋರ್:

ನ್ಯೂಜಿಲೆಂಡ್: 257/10

ವಿಲಿಯಮ್ಸನ್ 73,

ಹಸನ್ ಅಲಿ 59/3

ಪಾಕಿಸ್ತಾನ: 74/10

ಮೊಹಮ್ಮದ್ ಅಮೀರ್ 14

ಬೌಲ್ಟ್ 17/5

ಫಲಿತಾಂಶ: ನ್ಯೂಜಿಲೆಂಡ್'ಗೆ 183 ರನ್'ಗಳ ಜಯ; ಸರಣಿ ಕೈವಶ