ಕಸೌಲಿಯಲ್ಲಿ ನಡೆಯುತ್ತಿರುವ ಖುಷ್ವಂತ್ ಸಿಂಗ್ 7ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಿಧು, ನಾನು ದಕ್ಷಿಣ ಭಾರತ ಪ್ರವಾಸ ಮಾಡಿದಾಗ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಅವರ ಭಾಷೆಯನ್ನು ನನಗೆ ಅರ್ಥವಾಗುವುದಿಲ್ಲ. ಅಲ್ಲಿಯ ಆಹಾರ ಪದ್ದತಿಯೂ ನನಗೆ ಇಷ್ಟವಾಗುವುದಿಲ್ಲ. ಅವರ ಸಂಸ್ಕೃತಿ ಸಂಪೂರ್ಣ ವಿಭಿನ್ನ. ಆದರೆ ನಾನು ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಅಲ್ಲಿ ಪಂಜಾಬಿ ಇಲ್ಲವೇ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ನನಗೆ ಕಷ್ಟವಾಗುವುದಿಲ್ಲ ಎಂದಿದ್ದಾರೆ.
ನವದೆಹಲಿ[ಅ.13]: ಇಮ್ರಾನ್ ಖಾನ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾಗವಹಿಸಿದ್ದು ಅಲ್ಲದೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರನ್ನು ಅಪ್ಪಿಕ್ಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನದ ಪ್ರವಾಸವೇ ಚೆನ್ನಾಗಿತ್ತು ಎಂದು ಹೇಳಿದ್ದಾರೆ.
ಕಸೌಲಿಯಲ್ಲಿ ನಡೆಯುತ್ತಿರುವ ಖುಷ್ವಂತ್ ಸಿಂಗ್ 7ನೇ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಸಿಧು, ನಾನು ದಕ್ಷಿಣ ಭಾರತ ಪ್ರವಾಸ ಮಾಡಿದಾಗ ಸಾಕಷ್ಟು ಸಮಸ್ಯೆ ಎದುರಿಸಿದ್ದೇನೆ. ಅವರ ಭಾಷೆಯನ್ನು ನನಗೆ ಅರ್ಥವಾಗುವುದಿಲ್ಲ. ಅಲ್ಲಿಯ ಆಹಾರ ಪದ್ದತಿಯೂ ನನಗೆ ಇಷ್ಟವಾಗುವುದಿಲ್ಲ. ಅವರ ಸಂಸ್ಕೃತಿ ಸಂಪೂರ್ಣ ವಿಭಿನ್ನ. ಆದರೆ ನಾನು ಪಾಕಿಸ್ತಾನಕ್ಕೆ ಹೋದಾಗ ಅಲ್ಲಿ ಇಂತಹ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಅಲ್ಲಿ ಪಂಜಾಬಿ ಇಲ್ಲವೇ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವುದರಿಂದ ನನಗೆ ಕಷ್ಟವಾಗುವುದಿಲ್ಲ ಎಂದಿದ್ದಾರೆ.
ಸಿಧು ಹೇಳಿಕೆಯನ್ನು ಟೀಕಿಸಿರುವ ಅಕಾಲಿ ದಳದ ಹಿರಿಯ ಮುಖಂಡರೊಬ್ಬರು ಸಿಧು ಒಬ್ಬ ಪಾಕಿಸ್ತಾನದ ಪರ ಕ್ಷಮೆ ಕೇಳುವ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ. ಇನ್ನು ಬಿಜೆಪಿ ಕೂಡಾ ಸಿಧು ಹೇಳಿಕೆಯನ್ನು ಖಂಡಿಸಿದ್ದು, ಸಿಧು ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ದಕ್ಷಿಣ ಭಾರತವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದು ಅನ್ಯಾಯ ಹಾಗೂ ಖಂಡನಾರ್ಹವೆಂದು ಹೇಳಿದೆ.
ಸಿಧು ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಟ್ವಿಟರಿಗರು ಸಿಧುಗೆ ಚಾಟಿ ಬೀಸಿದ್ದಾರೆ.