ಸಯೀದ್ ಅಜ್ಮಲ್, ಯಾಸೀರ್ ಹಮೀದ್, ಇಮ್ರಾನ್ ಫರ್ಹಾತ್ ಸೇರಿದಂತೆ ಪಾಕಿಸ್ತಾನದ 20ಕ್ಕೂ ಅ ಪ್ರಮುಖ ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಂಗಾಡದಲ್ಲಿ ಐಸಿಸಿ ಮಾನ್ಯತೆ ಪಡೆದು ಆಯೋಜನೆಗೊಂಡಿದ್ದ ಟಿ20 ಪಂದ್ಯಾವಳಿಯೊಂದರಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ಪಡೆದುಕೊಂಡು ಆಟಗಾರರು ತೆರಳಿದ್ದಾರೆ.
ಕರಾಚಿ(ಡಿ.23): ಆಪ್ರೊ ಟಿ20 ಲೀಗ್’ನಲ್ಲಿ ಆಡಲು ಉಗಾಂಡಗೆ ಹೋದ ಪಾಕಿಸ್ತಾನ ಕ್ರಿಕೆಟಿಗರಿಗೆ ಆಘಾತ ಎದುರಾಗಿದೆ. ಪ್ರಾಯೋಜಕರು ಹಿಂದೆ ಸರಿದ ಕಾರಣ ಪಂದ್ಯಾವಳಿ ರದ್ದಾಗಿ ಅತ್ತ ವೇತನವೂ ಇಲ್ಲದೇ, ಇತ್ತ ತವರಿಗೆ ಮರಳಲು ವಿಮಾನ ಟಿಕೆಟ್ ಸಹ ಲಭಿಸದೆ ಆಟಗಾರರು ಪರದಾಡುವಂತಾಗಿದೆ.
ಸಯೀದ್ ಅಜ್ಮಲ್, ಯಾಸೀರ್ ಹಮೀದ್, ಇಮ್ರಾನ್ ಫರ್ಹಾತ್ ಸೇರಿದಂತೆ ಪಾಕಿಸ್ತಾನದ 20ಕ್ಕೂ ಅ ಪ್ರಮುಖ ಕ್ರಿಕೆಟಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಂಗಾಡದಲ್ಲಿ ಐಸಿಸಿ ಮಾನ್ಯತೆ ಪಡೆದು ಆಯೋಜನೆಗೊಂಡಿದ್ದ ಟಿ20 ಪಂದ್ಯಾವಳಿಯೊಂದರಲ್ಲಿ ಭಾಗವಹಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಮತಿ ಪಡೆದುಕೊಂಡು ಆಟಗಾರರು ತೆರಳಿದ್ದಾರೆ.
ಆದರೆ ಉಗಾಂಡದ ಕಂಪಾಲಕ್ಕೆ ಬಂದಿಳಿಯುತ್ತಿದ್ದಂತೆ ಆಟಗಾರರಿಗೆ, ಪಂದ್ಯಾವಳಿ ರದ್ದಾಗಿರುವ ವಿಷಯ ತಿಳಿದಿದೆ. ಆಯೋಜಕರ ಬಳಿ, ಶೇ.50ರಷ್ಟು ಸಂಭಾವನೆಯನ್ನಾದರೂ ಕೊಡಿ ಎಂದು ಆಟಗಾರರು ಮನವಿ ಮಾಡಿದ್ದಾರೆ. ಆದರೆ ಪ್ರಾಯೋಜಕರು ಹಿಂದೆ ಸರಿದ ಕಾರಣ, ತಮ್ಮ ಬಳಿ ಹಣವಿಲ್ಲ ಎಂದು ಹೇಳಿ ಉಗಾಂಡ ಕ್ರಿಕೆಟ್ ಸಂಸ್ಥೆ ಕೈತೊಳೆದುಕೊಂಡಿದೆ.
ವಿಮಾನ ಟಿಕೆಟ್’ಗಳೂ ರದ್ದು!: ತವರಿಗೆ ವಾಪಸಾಗಲು ಆಟಗಾರರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಮತ್ತೊಂದು ಆಘಾತ ಎದುರಾಗಿದೆ. ಆರ್ಥಿಕ ಸಂಕಷ್ಟದಿಂದಾಗಿ ಆಯೋಜಕರು ವಿಮಾನ ಟಿಕೆಟ್‌ಗಳಿಗೂ ಹಣ ಪಾವತಿಸಲು ಸಾಧ್ಯವಾಗಿಲ್ಲ. ತಮ್ಮ ಸ್ವಂತ ಹಣ ಖರ್ಚು ಮಾಡಿ ಹೋಟೆಲ್’ನಲ್ಲಿ ವಾಸ್ತವ್ಯ ಹೂಡಿದ ಆಟಗಾರರು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಪಾಕಿಸ್ತಾನ ರಾಯಭಾರಿ ಕಚೇರಿಯ ನೆರವು ಬೇಡಿದ್ದಾರೆ. ಇಂದು ಪಾಕ್ ಆಟಗಾರರು, ತವರಿಗೆ ಮರಳುವ ನಿರೀಕ್ಷೆ ಇದೆ.