ಫಿಫಾ ವಿಶ್ವಕಪ್‌ನಲ್ಲಿರುವ ಟಾಪ್ ಫೈವ್ ಗೋಲುಕೀಪರ್ ಯಾರು?
ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿರುವ ಬೆಸ್ಟ್ ಪ್ಲೇಯರ್ ಯಾರು ಅನ್ನೋದರ ಕುರಿತು ಚರ್ಚೆ ಆರಂಭವಾಗಿದೆ. ಅದರಲ್ಲೂ ಬೆಸ್ಟ್ ಗೋಲು ಕೀಪರ್ ಯಾರು ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ
ರಶ್ಯಾ(ಜೂನ್.9): ಫಿಫಾ ವಿಶ್ವಕಪ್ ಟೂರ್ನಿ ಇನ್ನೇನು ಕೆಲ ದಿನಗಳಲ್ಲಿ ಆರಂಭವಾಗಲಿದೆ. ಅಷ್ಟರಲ್ಲೇ ಈ ಬಾರಿ ಅತೀ ಹೆಚ್ಚು ಗೋಲು ಸಿಡಿಸುವ ಪ್ಲೇಯರ್ ಯಾರು? ಬೆಸ್ಟ್ ಡಿಫೆಂಡರ್ ಯಾರು? ಅನ್ನೋ ಪ್ರಶ್ನೆಗಳು ಈಗ ಅಭಿಮಾನಿಗಳ ಮನದಲ್ಲಿ ಶುರುವಾಗಿದೆ. ಫುಟ್ಬಾಲ್ ಟೂರ್ನಿಯಲ್ಲಿ ಗೋಲುಕೀಪರ್ ಪಾತ್ರವೂ ಅಷ್ಟೇ ಮುಖ್ಯ. ಹೀಗಾಗಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿರುವ ಬೆಸ್ಟ್ ಐವರು ಗೋಲು ಕೀಪರ್‌ಗಳ ವಿವರ ಇಲ್ಲಿದೆ.
ಡೇವಿಡ್ ಡೇ ಗಿಯಾ(ಸ್ಪೇನ್)
ಸ್ಪೇನ್‌ನ ನಂಬರ್.1 ಗೋಲು ಕೀಪರ್ ಡೇವಿಡ್ ಡೇ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲೂ ಮೋಡಿ ಮಾಡಲಿದ್ದಾರೆ. ಪ್ರೀಮಿಯರ್ ಲೀಗ್ ಟೂರ್ನಿಯಲ್ಲ ಮ್ಯಾಂಚೆಸ್ಟರ್ ಯುನೈಟೆಡ್ 2ನೇ ಸ್ಥಾನ ಅಲಂಕರಿಸಲು ಮುಖ್ಯ ಕಾರಣ ಇದೇ ಡೇವಿಡ್ ಡೇ. 2017-18ರ ಸಾಲಿನಲ್ಲಿ ಗೋಲ್ಡನ್ ಗ್ಲೌವ್ ಪ್ರಶಸ್ತಿ ಪಡೆದ ಡೇವಿಡ್, 18 ಕ್ಲೀನ್ ಶೀಟ್ ದಾಖಲೆ ಹೊಂದಿದ್ದಾರೆ.
ಮಾನ್ಯುಯೆಲ್ ನ್ಯುಯೆರ್(ಜರ್ಮನಿ)
ಜರ್ಮನ್ ಸೂಪರ್ ಸ್ಟಾರ್ ಮಾನ್ಯುಟೆಲ್ ನ್ಯುಯೆರ್ ಕಳೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕು ಕ್ಲೀನ್ ಶೀಟ್ ಸಾಧನೆ ಮಾಡಿದ್ದರು. ಈ ಮೂಲಕ ಜರ್ಮನಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ಸತತ ಎರಡನೇ ಬಾರಿಗೆ ಜರ್ಮನಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಲು ಮಾನ್ಯುಯೆಲ್ ಪಣತೊಟ್ಟಿದ್ದಾರೆ.
ಥಿಬೌಟ್ ಕೊರ್ಟೈಸ್(ಬೆಲ್ಜಿಯಂ)
ಬೆಲ್ಜಿಯಂ ತಂಡ 2014ರ ಫಿಫಾ ವಿಶ್ವಕಪ್ ಹಾಗೂ 2016ರ ಯುರೋ ಚಾಂಪಿಯನ್ಸ್ ಟೂರ್ನಿಯಲ್ಲಿ ಬೆಲ್ಜಿಯಂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆದರೆ ಗೋಲುಕೀಪರ್ ಥಿಬೌಟ್ ಕೊರ್ಟೈಸ್ ಮಾತ್ರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ಬಾರಿಯ ಎಫ್ಎ ಟೂರ್ನಿಯಲ್ಲಿ ಚೆಲ್ಸಾ ತಂಡ ಗೆಲುವಿನ ನಗೆ ಬೀರಲು ಮುಖ್ಯಕಾರಣ ಇದೇ ಥಿಬೌಟ್ ಕೊರ್ಟೈಸ್. ಚೆಲ್ಸಾ ಪರ 47 ಪಂದ್ಯವಾಡಿರುವ ಥಿಬೌಟ್ ಇದೀಗ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಗೋಲ್ಡನ್ ಗ್ಲೌವ್ ಪ್ರಶಸ್ತಿ ಪಡೆಯೋ ವಿಶ್ವಾಸದಲ್ಲಿದ್ದಾರೆ.
ಹ್ಯೂಗೋ ಲೊರಿಸ್(ಫ್ರಾನ್ಸ್)
ಫ್ರಾನ್ಸ್ ಹಾಗೂ ಟೊಟ್ಟೆನ್‌ಹ್ಯಾಮ್ ತಂಡದ ಸ್ಟಾರ್ ಪ್ಲೇಯರ್ ಹ್ಯೂಗೋ ಲೊರಿಸ್, ಒಂದು ಬಾರಿಯೂ ವಿಶ್ವಕಪ್ ಟೂರ್ನಿ ಎತ್ತಿಹಿಡಿದಿಲ್ಲ. ಆದರೆ ಗೋಲು ಕೀಪರ್ ವಿಚಾರದಲ್ಲಿ ಹ್ಯೂಗೋ ತಡೆಗೋಡೆ. ವಿಶ್ವಕಪ್ ಕ್ವಾಲಿಫೈನ 9 ಪಂದ್ಯಗಳಲ್ಲಿ 7 ಕ್ಲೀನ್ ಶೀಟ್ ದಾಖಲೆ ಮಾಡಿರುವ ಹ್ಯೂಗೋ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಇವರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಅಲಿಸನ್ ಬೆಕರ್(ಬ್ರೆಜಿಲ್)
ಚಾಂಪಿಯನ್ಸ್ ಟ್ರೋಫಿಯಲ್ಲಿ 22 ಕ್ಲೀನ್ ಶೀಟ್, ಅರ್ಹತಾ ಸುತ್ತಿನ ಪಂದ್ಯದಲ್ಲಿ 9 ಕ್ಲೀನ್ ಶೀಟ್..ಇದು ಬ್ರೆಜಿಲ್ ಗೋಲ್‌ಕೀಪರ್ ಅಲಿಸನ್ ಬೆಕರ್ ಸಾಧನೆ. ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕೆಂಬ ಛಲದಲ್ಲಿರುವ ಬ್ರೆಜಿಲ್ ತಂಡಕ್ಕೆ ಆಲಿಸನ್ ಬೆಕರ್ ಆಸರೆಯಾಗೋದರಲ್ಲಿ ಅನುಮಾನವಿಲ್ಲ.