ಫಿಫಾ ವಿಶ್ವಕಪ್: ಈ ಬಾರಿ ಯಾರ ಮುಡಿಗೆ ಚಾಂಪಿಯನ್ ಪಟ್ಟ?

sports | Wednesday, June 13th, 2018
Suvarna Web Desk
Highlights

2018ರ ಫಿಫಾ ವಿಶ್ವಕಪ್ ಟೂರ್ನಿ ಇದೀಗ ಕುತೂಹಲಗಳ ಸಾಗರವಾಗಿದೆ. ಯಾರು ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾರೆ, ಯಾರು ಗೋಲ್ಡನ್ ಬೂಟ್ ಪ್ರಶಸ್ತಿ ಪಡೆಯಲಿದ್ದಾರೆ ಅನ್ನೋ ಚರ್ಚೆಗಳು ಸಾಮಾನ್ಯವಾಗಿದೆ. ಹಾಗಾದರೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿರೋ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ವಿವರ.

ರಷ್ಯಾ(ಜೂನ್.13): ರಷ್ಯಾದಲ್ಲಿ ನಡೆಯಲಿರುವ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಬಾರಿ ಕುತೂಹಲ ಕೆರಳಿಸಿದೆ. ಇದಕ್ಕೆ ಕಾರಣ 5 ತಂಡಗಳ ನಡುವೆ ನೇರಾ ನೇರಾ ಸ್ಪರ್ಧೆ ಎರ್ಪಟ್ಟಿದೆ. ಕಣದಲ್ಲಿರುವ 32 ತಂಡಗಳು ಪ್ರಶಸ್ತಿಗಾಗಿ ತೀವ್ರ ಹೋರಾಟ ನಡೆಸಲಿದೆ. 

2018ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿರೋ ಕೆಲ ಆಟಗಾರರ  ಮೇಲೆ ಬಾರಿ ನಿರೀಕ್ಷೆ ಇದೆ. ಇವರ ಪ್ರದರ್ಶನದ ಮೇಲೆ ತಂಡದ ಫಲಿತಾಂಶ ನಿರ್ಧಾರವಾಗಲಿದೆ. ಹಾಗಾದರ ಆ 6 ಆಟಗಾರರು ಹಾಗೂ ಅವರ ತಂಡದ ಕುರಿತ ವಿವರ ಇಲ್ಲಿದೆ.

ಲಿಯೋನಲ್ ಮೆಸ್ಸಿ(ಅರ್ಜೆಂಟೀನಾ):


ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಮೇಲೆ ಬಾರಿ ನಿರೀಕ್ಷೆ ಇದೆ. 2017-18ರ ಸಾಲಿನಲ್ಲಿ ಮೆಸ್ಸಿ ಬರೋಬ್ಬರಿ 45 ಗೋಲು ಸಿಡಿಸಿದ್ದಾರೆ.  ಈ ಮೂಲಕ ಮೆಸ್ಸಿ ಅತ್ಯುತ್ತಮ ಲಯದಲ್ಲಿರೋದನ್ನ ಸಾಬೀತುಪಡಿಸಿದ್ದಾರೆ. ಹೀಗಾಗಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಸ್ಸಿ ಗೋಲಿನ ಸುರಿಮಳೆ ಸುರಿಸಲಿದ್ದಾರೆ.

ನೇಯ್ಮರ್(ಬ್ರೆಜಿಲ್): 


ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಗಾಯಗೊಂಡು ಬ್ರೆಜಿಲ್ ತಂಡದ ಆತಂಕಕ್ಕೆ ಕಾರಣವಾಗಿದ್ದ ನಾಯಕ ನೇಯ್ಮರ್ ಇದೀಗ ಚೇತರಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ, ಆಸ್ಟ್ರಿಯಾ ವಿರುದ್ದದ ಪಂದ್ಯದಲ್ಲಿ ಗೋಲು ಸಿಡಿಸೋ ಮೂಲಕ, ವಿಶ್ವಕಪ್ ಹೋರಾಟಕ್ಕೆ ಸಂಪೂರ್ಣವಾಗಿ ರೆಡಿಯಾಗಿದ್ದಾರೆ. ನೇಯ್ಮರ್ ಪ್ರದರ್ಶನದ ಮೇಲೆ ಬ್ರೆಜಿಲ್ ಸೋಲು-ಗೆಲುವು ನಿರ್ಧಾರವಾಗಲಿದೆ.

ಟೋನಿ ಕ್ರೂಸ್(ಜರ್ಮನಿ):


ಜರ್ಮನಿ ತಂಡದ ಮಿಡ್‌ಫೀಲ್ಡರ್ ಟೋನಿ ಕ್ರೂಸ್, 2014ರ ಫಿಫಾ ವಿಶ್ವಕಪ್ ಗೆಲುವಿನಲ್ಲಿ ಪ್ರಮಖ ಪಾತ್ರ ನಿರ್ವಹಿಸಿದ್ದರು. ಈ ಬಾರಿಯೂ ಜರ್ಮನಿ ತಂಡಕ್ಕೆ ಗೆಲುವಿನ ಕೀರಿಟ ತೊಡಿಸಲು ಪಣತೊಟ್ಟಿರುವ ಕ್ರೂಸ್, ಮೋಡಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇಸ್ಕೋ(ಸ್ಪೇನ್):


ಸ್ಪೇನ್ ತಂಡದ ಸ್ಟಾರ್ ಮಿಡ್‌ಫೀಲ್ಡರ್ ಇಸ್ಕೋ(ಫ್ರಾನ್ಸಿಸ್ಕೋ ರೋಮ್ ಅಲರ್ಕಾನ್) ಈ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಲಾ ಲೀಗ ಟೂರ್ನಿಯಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಪರ ಆಡುತ್ತಿರುವ ಇಸ್ಕೋ,  ತಂಡಕ್ಕೆ ಮುನ್ನಡೆ ತಂದುಕೊಡೋದರಲ್ಲಿ ಎತ್ತಿದ ಕೈ. 

ಕ್ರಿಸ್ಟಿಯಾನೋ ರೋನಾಲ್ಡೋ(ಪೋರ್ಚುಗಲ್):


ಪೋರ್ಚುಗಲ್ ತಂಡದಲ್ಲಿ ಹಲವು ಸ್ಟಾರ್ ಪ್ಲೇಯರ್‌ಗಳಿದ್ದರೂ ಫಿಫಾ ವಿಶ್ವಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಅದರಲ್ಲೂ ಕ್ರಿಸ್ಟಿಯಾನೋ ರೋನಾಲ್ಡೋ ಈ ಬಾರಿ ಪೊರ್ಚುಗಲ್ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡೋ ವಿಶ್ವಾಸದಲ್ಲಿದ್ದಾರೆ. ಓಟ್ಟು 150 ಪಂದ್ಯದಿಂದ 81 ಗೋಲು ಸಿಡಿಸಿ ಅಗ್ರಸ್ಥಾನದಲ್ಲಿರುವ ರೋನಾಲ್ಡೋ, ಹೊಸ ಹುಮ್ಮಸ್ಸಿನಲ್ಲಿದ್ದಾರೆ.

ಲೂಯಿಸ್ ಸ್ವಾರೇಜ್(ಉರುಗ್ವೆ):


2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಉರುಗ್ವೆ ತಂಡ ಬಲಿಷ್ಠ ತಂಡಗಳಿಗೆ ನೀರು ಕುಡಿಸಿತ್ತು. ಇದಕ್ಕೆ ಮುಖ್ಯ ಕಾರಣ ತಂಡದ ಫಾರ್ವಡ್ ಪ್ಲೇಯರ್ ಲೂಯಿಸಿ ಸ್ವಾರೇಜ್. 98 ಪಂದ್ಯದಿಂದ 51 ಗೋಲು ಸಿಡಿಸಿರುಲ ಸ್ವಾರೇಜ್ 2018ರ ವಿಶ್ವಕಪ್ ಟೂರ್ನಿಯಲ್ಲಿ ಇತಿಹಾಸ ರಚಿಸೋ ವಿಶ್ವಾಸದಲ್ಲಿದ್ದಾರೆ.

 

Comments 0
Add Comment

  Related Posts

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka Prepoll 2018 Part 5

  video | Friday, April 13th, 2018

  India Today Karnataka Prepoll 2018 Part 2

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018
  Chethan Kumar