IPL 2019: ಗರಿಷ್ಠ ಬೌಂಡರಿ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳಿವರು..!
2008ರಲ್ಲಿ ಆರಂಭವಾದ ಐಪಿಎಲ್ ಯಶಸ್ವಿ 11 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಹೊಡಿಬಡಿ ಆಟಕ್ಕೆ ಹೆಸರಾದ ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ಗರಿಷ್ಠ ಬೌಂಡರಿ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ಮುಂದಿಡುತ್ತಿದೆ.
ಟಿ20 ಕ್ರಿಕೆಟ್ ಅಂದರೆ ಮೊದಲು ನೆನಪಾಗುವುದೇ ಸಿಕ್ಸರ್’ಗಳು, ಆ ಬಳಿಕ ಬೌಂಡರಿ. ಅದರಲ್ಲೂ ಐಪಿಎಲ್’ನಲ್ಲಿ ಬೌಂಡರಿ ಬಾರಿಸುವುದು ಸುಲಭವಲ್ಲ. ಏಕೆಂದರೆ ವಿಶ್ವದರ್ಜೆಯ ಕ್ಷೇತ್ರರಕ್ಷಕರನ್ನು ವಂಚಿಸಿ ಬೌಂಡರಿ ಬಾರಿಸುವುದು ಸಿಕ್ಸರ್ ಬಾರಿಸಿದಷ್ಟು ಸುಲಭವಲ್ಲ.
2008ರಲ್ಲಿ ಆರಂಭವಾದ ಐಪಿಎಲ್ ಯಶಸ್ವಿ 11 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಹೊಡಿಬಡಿ ಆಟಕ್ಕೆ ಹೆಸರಾದ ಈ ಚುಟುಕು ಕ್ರಿಕೆಟ್ ಮಹಾ ಸಂಗ್ರಾಮದಲ್ಲಿ ಗರಿಷ್ಠ ಬೌಂಡರಿ ಸಿಡಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿಯನ್ನು ಸುವರ್ಣನ್ಯೂಸ್.ಕಾಂ ಮುಂದಿಡುತ್ತಿದೆ.
ಅದರಲ್ಲೂ ಕೋಲ್ಕತಾ ನೈಟ್ ರೈಡರ್ಸ್ ಆಗಿ ಮಿಂಚಿದ್ದ ಡೆಲ್ಲಿ ಡ್ಯಾಶರ್ ಗೌತಮ್ ಗಂಭೀರ್ 491 ಬೌಂಡರಿ ಬಾರಿಸುವ ಮೂಲಕ ನಂ.1 ಸ್ಥಾನದಲ್ಲಿದ್ದಾರೆ. ಆ ಬಳಿಕ ಮತ್ತೋರ್ವ ಡೆಲ್ಲಿ ಮೂಲದ ಪ್ರತಿಭೆ ಶಿಖರ್ ಧವನ್ 460 ಸಿಕ್ಸರ್’ಗಳೊಂದಿಗೆ 2ನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್’ಕಿಂಗ್ಸ್’ನ ನಂಬಿಕಸ್ಥ ಬ್ಯಾಟ್ಸ್’ಮನ್ ಸುರೇಶ್ ರೈನಾ ಟಾಪ್ 3 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು 2015ರಲ್ಲಿ ಐಪಿಎಲ್’ಗೆ ಗುಡ್ ಬೈ ಹೇಳಿರುವ ಸ್ಫೋಟಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ಟಾಪ್ 10 ಪಟ್ಟಿಯೊಳಗೆ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಕತಾಳೀಯವೆಂದರೆ ಟಾಪ್ 01 ಹಾಗೂ ಹಾಗೂ ಟಾಪ್ 10ನಲ್ಲಿರುವ ಈ ಇಬ್ಬರು ಡೆಲ್ಲಿ ಬ್ಯಾಟ್ಸ್’ಮನ್’ಗಳು ಇದೇ ಮೊದಲ ಬಾರಿಗೆ 12ನೇ ಆವೃತ್ತಿಯ ಐಪಿಎಲ್’ನಲ್ಲಿ ಕಣಕ್ಕಿಳಿಯುತ್ತಿಲ್ಲ. ಇನ್ನೂ ಅಚ್ಚರಿ ಎಂದರೆ ಅತಿ ಹೆಚ್ಚು ಅಚ್ಚರಿ ಎಂದರೆ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದ ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್, ಅತಿ ಹೆಚ್ಚು ಬೌಂಡರಿ ಬಾರಿಸಿದ ಟಾಪ್ 10 ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ.
1. ಗೌತಮ್ ಗಂಭೀರ್ : 491
02. ಶಿಖರ್ ಧವನ್ : 460
03. ಸುರೇಶ್ ರೈನಾ : 448
04. ವಿರಾಟ್ ಕೊಹ್ಲಿ : 434
05. ರಾಬಿನ್ ಉತ್ತಪ್ಪ : 401
06. ಡೇವಿಡ್ ವಾರ್ನರ್ : 401
07. ರೋಹಿತ್ ಶರ್ಮಾ : 379
08. ಅಜಿಂಕ್ಯ ರಹಾನೆ : 359
09. ದಿನೇಶ್ ಕಾರ್ತಿಕ್ : 335
10. ವಿರೇಂದ್ರ ಸೆಹ್ವಾಗ್ : 334