ಟೋಕಿಯೋ(ಜು.21): 2020ರಲ್ಲಿ ಒಲಿಂಪಿಕ್ಸ್‌'ಗೆ ಆತಿಥ್ಯ ವಹಿಸಲು ಸಿದ್ಧತೆ ನಡೆಸಿರುವ ಜಪಾನ್‌'ಗೆ ಭೂಕಂಪ ಹಾಗೂ ಸುನಾಮಿ ಭೀತಿ ಎದುರಾಗಿದೆ.

ಟೋಕಿಯೋ ವಿಶ್ವವಿದ್ಯಾನಿಲಯದ ಭೂಕಂಪ ಭವಿಷ್ಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ನವೊಶಿ ಹಿರಾಟ, ಒಲಿಂಪಿಕ್ಸ್‌ಗೂ ಮುನ್ನ ಭಾರೀ ಭೂಕಂಪವಾಗುವ ಸಂಭವವಿದ್ದು, ಕ್ರೀಡಾಕೂಟದ ಆಯೋಜನೆಗೆ ಸಮಸ್ಯೆ ಉಂಟಾಗಲಿದೆ ಎಂದು ತಿಳಿಸಿದ್ದಾರೆ.

‘ಒಲಿಂಪಿಕ್ಸ್‌ಗೂ ಮುನ್ನ ಭೂಕಂಪ ಉಂಟಾದಲ್ಲಿ ಕ್ರೀಡಾಕೂಟಕ್ಕೆ ಕಲ್ಪಿಸಿರುವ ಮೂಲಸೌರ್ಕಯಗಳಿಗೆ ಭಾರೀ ಹಾನಿಯಾಗಲಿದೆ. ಅಲ್ಲದೇ ನಮ್ಮ ಆರ್ಥಿಕ ವ್ಯವಸ್ಥೆಗೂ ಪೆಟ್ಟು ಬೀಳಲಿದೆ’ ಎಂದು ಹಿರಾಟ ಹೇಳಿದ್ದಾರೆ.

2011ರಲ್ಲಿ ಸುನಾಮಿಯಿಂದಾಗಿ ಈಶಾನ್ಯ ಜಪಾನ್‌'ನಲ್ಲಿ 18,500 ಜನ ಸಾವನ್ನಪ್ಪಿದ್ದರು.