ಇಷ್ಟು ದಿನಗಳ ಕಾಲ ಭಾರತೀಯ ಕ್ರಿಕೆಟ್​​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಇಂಗ್ಲೆಂಡ್​​​ ವಿರುದ್ಧದ ಏಕದಿನ ಸರಣಿ ಇಂದಿನಿಂದ ಶುರುವಾಗಲಿದೆ. ಧೋನಿ ನಾಯಕತ್ವ ತ್ಯಜಿಸಿದ ಮೇಲೆ ಪ್ರಪ್ರಥಮ ಭಾರಿಗೆ ವಿರಾಟ್​​​​ ಕೊಹ್ಲಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರ ಮೊದಲ ಅಗ್ನಿಪರಿಕ್ಷೆಗೆ ಪುಣೆ ಕ್ರಿಡಾಂಗಣ ವೇದಿಕೆಯಾಗಲಿದೆ.

ಪುಣೆ(ಜ.15): ಇಷ್ಟು ದಿನಗಳ ಕಾಲ ಭಾರತೀಯ ಕ್ರಿಕೆಟ್​​ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಇಂಗ್ಲೆಂಡ್​​​ ವಿರುದ್ಧದ ಏಕದಿನ ಸರಣಿ ಇಂದಿನಿಂದ ಶುರುವಾಗಲಿದೆ. ಧೋನಿ ನಾಯಕತ್ವ ತ್ಯಜಿಸಿದ ಮೇಲೆ ಪ್ರಪ್ರಥಮ ಭಾರಿಗೆ ವಿರಾಟ್​​​​ ಕೊಹ್ಲಿ ಟೀಂ ಇಂಡಿಯಾದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರ ಮೊದಲ ಅಗ್ನಿಪರಿಕ್ಷೆಗೆ ಪುಣೆ ಕ್ರಿಡಾಂಗಣ ವೇದಿಕೆಯಾಗಲಿದೆ.

2017ರ ಮೊದಲ ಸರಣಿಗೆ ಟೀಂ ಇಂಡಿಯಾ ಸರ್ವಸನ್ನಧವಾಗಿದೆ. ಇಂದಿನಿಂದ ನಡೆಯಲ್ಲಿರುವ ಇಂಗ್ಲೆಂಡ್​​​ ವಿರುದ್ಧದ ಏಕದಿನ ಸರಣಿಗೆ ವಿರಾಟ್​​​ ಕೊಹ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕೊಹ್ಲಿಯ ನಅಯಕತ್ವದ ಮೊದಲ ಸರಣಿಗೆ ಪುಣೆ ಮೈದಾನ ವೇದಿಕೆಯಾಗಲಿದೆ.

ಇಂಗ್ಲೆಂಡ್​​​ ವಿರುದ್ಧ ಟೆಸ್ಟ್​​​ ಸರಣಿ ಗೆದ್ದಿರುವ ಟೀಂ ಇಂಡಿಯಾ ಏಕದಿನ ಸರಣಿಯನ್ನೂ ವಶಪಡಿಸಿಕೊಳ್ಳೋ ವಿಶ್ವಾಸದಲದಲಿದೆ. ಇದಕ್ಕಾಗಿ ಟೀಂ ಇಂಡಿಯಅ ಆಟಗಾರರು ಕಠಿಣ ಅಭ್ಯಾಸ ನಡೆಸಿದ್ದಾರೆ. ಟೀಂ ಇಂಡಿಯಾ ನಾಯಕತ್ವವನ್ನ ಕೊಹ್ಲಿ ಪಡೆದ ನಂತರ ಟೀಂ ಇಂಡಿಯಾದಲ್ಲಿ ಮೇಜರ್​​ ಸರ್ಜರಿಯಾಗಿದೆ. ಗಾಯಾಳುಗಳಾಗಿ ಧೀರ್ಘಕಾಲ ತಂಡದಿಂದ ಹೋರಗುಳಿದಿದ್ದ ಶೀಖರ್​​​ ಧವನ್​​, ಹಾರ್ದಿಕ್​​ ಪಾಂಡ್ಯಾ ಮತ್ತೆ ಟೀಂ ಇಂಡಿಯಾಗೆ ಎಂಟ್ರಿ ಪಡೆದಿದ್ದಾರೆ. ಇನ್ನೂ ಫಾರ್ಮ್​ ಕಳೆದುಕೊಂಡು ತಂಡದಿಂದ ಹೊರಬಿದ್ದಿದ್ದ ಯುವಿ ಮೂರು ವರ್ಷಗಳ ನಂತರ ಮತ್ತೆ ಕಮ್​​​​ಬ್ಯಾಕ್​​ ಮಾಡಿದ್ದಾರೆ.

ಇನ್ನೂ ಟೆಸ್ಟ್​​​ ಸರಣಿ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್, ಏಕದಿನ ಸರಣಿ ಗೆದ್ದು ಸೇಡು ತೀರಿಸಿಕೊಳ್ಳೋ ವಿಶ್ವಾಸದಲ್ಲಿದೆ. ಇದಕ್ಕಾಗಿ ಮಾರ್ಗನ್​ ಆಲ್​​ರೌಂಡರ್​​​ಗಳ ದಂಡನ್ನೆ ಭಾರತಕ್ಕೆ ಕರೆತಂದಿದ್ದಾರೆ. ಜೇಕ್​​​​ ಬಾಲ್​​ ಹೋರತುಪಡಿಸಿದ್ರೆ ಇನ್ನುಳಿದ ಎಲ್ಲಾ ಆಟಗಾರರು ಬ್ಯಾಟ್​​​ನಲ್ಲಿ ಕಮಾಲ್​​ ಮಾಡುವವರೆ.

ಒಟ್ಟಿನಲ್ಲಿ ಇಂದಿನ ಪಂದ್ಯಕ್ಕೆ ಎರಡೂ ತಂಡಗಳು ಸರ್ವಸನ್ನಧವಾಗಿವೆ. ಆದ್ರೆ ಪುಣೆಯ ಹಿಸ್ಟರಿ ಮಾತ್ರ ಭಾರತದ ವಿರುದ್ಧವಾಗಿದೆ. ಆಡಿರುವ ಒಂದು ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿದೆ. ಆದ್ರೆ ಸಂಕ್ರಾಂತಿಯ ಹಬ್ಬದ ಖುಷಿಯಲ್ಲಿರುವ ಕ್ರಿಕೆಟ್​​ ಅಭಿಮಾನಿಗಳಿಗೆ ಕೊಹ್ಲಿ ಬಾಯ್ಸ್​​​ ಹೋಳಿಗೆ ಊಟ ಉಣಬಣಿಸುತ್ತಾರಾ ಕಾದು ನೋಡಬೇಕು.