ವಿಜೇಂದರ್-ಜುಲ್ಫಿಕರ್ ನಡುವಿನ ಪಂದ್ಯವು ಇಂದು ಸಂಜೆ 6.30ಕ್ಕೆ ನಡೆಯಲಿದ್ದು, ಸೋನಿ ಟೆನ್ ಚಾನೆಲ್'ನಲ್ಲಿ ಪ್ರಸಾರವಾಗಲಿದೆ.

ಮುಂಬೈ(ಆ.05): ಭಾರತದ ಬಾಕ್ಸಿಂಗ್ ಸ್ಟಾರ್ ವಿಜೇಂದರ್ ಸಿಂಗ್ ಎರಡನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಇಂದು ಚೀನಾದ ಜುಲ್ಫಿಕರ್ ಮೈಮೈಟಿಯಾಲಿ ವಿರುದ್ಧ ಹೋರಾಡಲು ಸಿದ್ಧವಾಗಿದ್ದಾರೆ.

ಈ ಪಂದ್ಯಕ್ಕಾಗಿ ವಿಜೇಂದರ್ ತಮ್ಮ ತರಬೇತುದಾರ ಲೀ ಬಿಯರ್ಡ್ ಅವರೊಂದಿಗೆ ಮ್ಯಾಂಚೇಸ್ಟರ್'ನಲ್ಲಿ ತಯಾರಿ ನಡೆಸಿದ್ದಾರೆ. ಅಲ್ಲದೇ ವಿಜೇಂದರ್ ಪಂದ್ಯ ವೀಕ್ಷಿಸಲು ಸಚಿನ್'ಗೆ ಮೊದಲ ಟಿಕೆಟ್ ನೀಡುವ ಮೂಲಕ ಆಹ್ವಾನಿಸಿದ್ದರು.

ಇದು ಭಾರತ ವರ್ಸಸ್ ಚೀನಾ ಪಂದ್ಯ. ಎದುರಾಳಿಯನ್ನು ನೆಲಕ್ಕೆ ಉರುಳಿಸುವುದೊಂದೇ ನನ್ನ ಗುರಿ. ನನ್ನೊಂದಿಗೆ ಇಡೀ ಭಾರತವೇ ಇದೆ' ಎಂದು ವಿಜೇಂದರ್ ಹೇಳಿದ್ದಾರೆ.

ವಿಜೇಂದರ್-ಜುಲ್ಫಿಕರ್ ನಡುವಿನ ಪಂದ್ಯವು ಇಂದು ಸಂಜೆ 6.30ಕ್ಕೆ ನಡೆಯಲಿದ್ದು, ಸೋನಿ ಟೆನ್ ಚಾನೆಲ್'ನಲ್ಲಿ ಪ್ರಸಾರವಾಗಲಿದೆ.