2 ವರ್ಷ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.

ಪುಣೆ: 2 ವರ್ಷ ನಿಷೇಧದ ಬಳಿಕ ಐಪಿಎಲ್‌ಗೆ ವಾಪಸಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಹಿಂದಿನ ಪಂದ್ಯದಲ್ಲಿ ಸೋಲುಂಡಿದ್ದು, ಗೆಲುವಿನ ಹಳಿಗೆ ಮರಳಲು ಕಾತರಿಸುತ್ತಿವೆ. ಕೆಕೆಆರ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಸ್ಪಿನ್ ಬಲೆಗೆ ಬಿದ್ದಿದ್ದ ರಾಯಲ್ಸ್ ತನ್ನ ದೌರ್ಬಲ್ಯ ವನ್ನು ಪ್ರದರ್ಶಿಸಿದೆ.

ಸಿಎಸ್‌ಕೆ ತಂಡದಲ್ಲೂ ಹರ್ಭಜನ್, ಇಮ್ರಾನ್ ತಾಹಿರ್, ರವೀಂದ್ರ ಜಡೇಜಾರಂತಹ ಪರಿಣಾಮಕಾರಿ ಸ್ಪಿನ್ನರ್‌ಗಳಿದ್ದು, ಅಜಿಂಕ್ಯ ರಹಾನೆ ಪಡೆಗೆ ಕಠಿಣ ಸವಾಲು ಎದುರಾಗಲಿದೆ. ಸ್ಯಾಮ್ಸನ್ 185 ರನ್ ಕಲೆಹಾಕಿದ್ದು, ತಂಡ ಅವರ ಮೇಲೆ ಹೆಚ್ಚಿನ ವಿಶ್ವಾಸವಿಟ್ಟಿದೆ. ಮತ್ತೊಂದೆಡೆ ಧೋನಿ ಅಬ್ಬರದ ನಡುವೆಯೂ ಕಿಂಗ್ಸ್ ವಿರುದ್ಧ ಸೋಲುಂಡಿದ್ದ ಚೆನ್ನೈ, ಪುಟಿದೇಳಲು ಎದುರು ನೋಡುತ್ತಿದೆ.

ನೀರಿನ ಸಮಸ್ಯೆ ನಡುವೆಯೂ ಪುಣೆ ಪಂದ್ಯ ಆತಿಥ್ಯಕ್ಕೆ ಸಜ್ಜಾಗಿದ್ದು, ಸದ್ಯಕ್ಕೆ ಸಿಎಸ್‌ಕೆ ಪಂದ್ಯಗಳು ಪುಣೆಯಿಂದ ಸ್ಥಳಾಂತರವಾಗುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.