ಹುಬ್ಬಳ್ಳಿ(ಸೆ.02): ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕೆಪಿಎಲ್ಗೆ ಇಂದು ತೆರೆ ಬೀಳುತ್ತಿದೆ. ಇಂದು ಕೆಎಸ್ಸಿಎ ರಾಜನಗರ್ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೀತಾ ಇದೆ.
ಇಂದು ಹುಬ್ಬಳ್ಳಿ ಸ್ಟೇಡಿಯಂ ಭರ್ತಿಯಾಗಲಿದೆ. ಆತಿಥೇಯ ಹುಬ್ಬಳ್ಳಿ ಟೈಗರ್ಸ್ ಮತ್ತು ಬಳ್ಳಾರಿ ಟಸ್ಕರ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಎರಡು ಟೀಮ್ನಲ್ಲೂ ಹೇಳಿಕೊಳ್ಳುವಂತಹ ಸ್ಟಾರ್ ಆಟಗಾರರು ಇಲ್ಲ. ಆದ್ರೂ ಬಲಿಷ್ಠವಾಗಿವೆ. ಲೀಗ್ನಲ್ಲಿ ಬಳ್ಳಾರಿ ವಿರುದ್ಧ ಹುಬ್ಬಳ್ಳಿ ಟೈಗರ್ಸ್ ಜಯ ಸಾಧಿಸಿತ್ತು. ಇದರಿಂದ ಇಂದು ಟೈಗರ್ಸ್ ಫೇವರಿಟ್ ಆಗಿದೆ.
ಸೆಕೆಂಡ್ ಸೆಮಿಫೈನಲ್ನಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನ 4 ವಿಕೆಟ್ಗಳಿಂದ ಸೋಲಿಸಿದ ಟೈಗರ್ಸ್ ಫೈನಲ್ಗೇರಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 153 ರನ್ ಬಾರಿಸ್ತು. ಹುಬ್ಬಳ್ಳಿ ತಂಡ ಇನ್ನು 8 ಬಾಲ್ ಬಾಕಿ ಇರುವಾಗ್ಲೇ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮೊದಲ ಸೆಮಿಫೈನಲ್ನಲ್ಲಿ ಗೆದ್ದ ಬಳ್ಳಾರಿ ಟಸ್ಕರ್ಸ್ ತಂಡ ಫೈನಲ್ ಪ್ರವೇಶಿಸಿದೆ. ಮನೀಶ್ ಪಾಂಡೆ ನಾಯಕತ್ವದ ಮೈಸೂರು ವಾರಿಯರ್ಸ್ ವಿರುದ್ಧ ಟಸ್ಕರ್ಸ್ ತಂಡ 10 ರನ್ಗಳಿಂದ ಜಯ ಸಾಧಿಸ್ತು. ಮೊದಲು ಬ್ಯಾಟಿಂಗ್ ಮಾಡಿದ ಬೆಳ್ಳಾರಿ ಟಸ್ಕರ್ಸ್ ತಂಡ 20 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 157 ರನ್ ಬಾರಿಸ್ತು. ಕೆಬಿ ಪವನ್ ಅರ್ಧಶತಕ ಬಾರಿಸಿದ್ರು. ಬಳಿಕ ಮೈಸೂರು ವಾರಿಯರ್ಸ್ 20 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಸೋಲು ಅನುಭವಿಸ್ತು. ಮನೀಶ್ ಪಾಂಡೆ ವಿಫಲವಾಗಿದ್ದು ಮೈಸೂರು ಸೋಲಿಗೆ ಕಾರಣವಾಯ್ತು.
