ನಿವೃತ್ತಿಯ ಬಳಿಕ ಶ್ರೀನಾಥ್ ಕ್ರಿಕೆಟ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರು(ಆ.31): ಟೀಂ ಇಂಡಿಯಾದ ಮಾಜಿ ವೇಗದ ಬೌಲರ್, ಅಪ್ಪಟ ಕನ್ನಡಿಗ ಜಾವಗಲ್ ಶ್ರೀನಾಥ್ ಇಂದು 48ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ದಶಕಗಳ ಕಾಲ ಭಾರತ ತಂಡದ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದ ಜಾವಗಲ್ ಶ್ರೀನಾಥ್, 229 ಏಕದಿನ ಪಂದ್ಯಗಳಲ್ಲಿ 315 ವಿಕೆಟ್ ಕಬಳಿಸಿದ್ದರು. ಇನ್ನೂ ಟೆಸ್ಟ್ ಕ್ರಿಕೆಟ್'ನಲ್ಲೂ ಮಿಂಚು ಹರಿಸಿದ್ದ ಜಾವಗಲ್ ಎಕ್ಸ್'ಪ್ರೆಸ್ 67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್ ಕಿತ್ತಿದ್ದರು.
ಮೈದಾನದ ಒಳಗೆ ಹಾಗೂ ಹೊರಗೆ ಜಾವಗಲ್ ಶ್ರೀನಾಥ್ ಸ್ನೇಹಿತರಾಗಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ಅವರಿಬ್ಬರೂ ಒಟ್ಟಿಗೆ ಇರುವ ಭಾವಚಿತ್ರದೊಂದಿಗೆ ಶ್ರೀನಾಥ್'ಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ನಿವೃತ್ತಿಯ ಬಳಿಕ ಶ್ರೀನಾಥ್ ಕ್ರಿಕೆಟ್ ರೆಫ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುವರ್ಣ'ನ್ಯೂಸ್ ವತಿಯಿಂದಲೂ ಜಾವಗಲ್ ಶ್ರೀನಾಥ್ ಅವರಿಗೆ ಜನ್ಮದಿನದ ಶುಭಾಶಯಗಳು...
