ನಿಯಮ ಉಲ್ಲಂಘನೆ: ವೇಗಿ ಟಿಮ್ ಸೌಥಿಗೆ ಎಚ್ಚರಿಕೆ

Tim Southee reprimanded for breaching code of conduct
Highlights

3ನೇ ಅಂಪೈರ್ ಔಟ್ ಎಂದು ಘೋಷಿಸಿರಲಿಲ್ಲ. ಪಂದ್ಯ ಮುಗಿದ ಬಳಿಕ ಸೌಥಿ, ‘ಹೇಲ್ಸ್ ಕ್ಯಾಚ್ ಸರಿಯಾಗಿಯೇ ಹಿಡಿದಿದ್ದೆ. ಆದರೂ 3ನೇ ಅಂಪೈರ್ ಔಟ್ ನೀಡಲಿಲ್ಲ

ನವದೆಹಲಿ(ಮೇ.19): ಗುರುವಾರ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ನಿಯಮ ಉಲ್ಲಂಘಿಸಿದ ಆರ್‌ಸಿಬಿ ವೇಗಿ ಟಿಮ್ ಸೌಥಿ ಹಾಗೂ ತಂಡದ ಅಧಿಕಾರಿಗಳಿಗೆ ಐಪಿಎಲ್ ಮಂಡಳಿ ಎಚ್ಚರಿಕೆ ನೀಡಿದೆ.
ಹೇಲ್ಸ್ ಬಾರಿಸಿದ ಚೆಂಡನ್ನು ಸೌಥಿ ಕ್ಯಾಚ್ ಹಿಡಿದಿದ್ದರು. ಅದರೆ, 3ನೇ ಅಂಪೈರ್ ಔಟ್ ಎಂದು ಘೋಷಿಸಿರಲಿಲ್ಲ. ಪಂದ್ಯ ಮುಗಿದ ಬಳಿಕ ಸೌಥಿ, ‘ಹೇಲ್ಸ್ ಕ್ಯಾಚ್ ಸರಿ ಯಾಗಿಯೇ ಹಿಡಿದಿದ್ದೆ. ಆದರೂ 3ನೇ ಅಂಪೈರ್ ಔಟ್ ನೀಡಲಿಲ್ಲ’ ಎನ್ನುವ ಮೂಲಕ ಅಂಪೈರ್ ತೀರ್ಪಿನ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.

loader