ಬೆಂಗಳೂರು[ಜು.16]: ಕಳೆದೊಂದು ತಿಂಗಳಿನಿಂದ ಫುಟ್ಬಾಲ್ ಅಭಿಮಾನಿಗಳ ಮನಗೆದ್ದಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್’ನಲ್ಲಿ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂಗ್ಲೆಂಡ್’ನ ಹ್ಯಾರಿ ಕೇನ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದರೆ, ಕ್ರೊವೇಷಿಯಾದ ಲೂಕಾ ಮಾಡ್ರಿಚ್ ಗೋಲ್ಡನ್ ಬಾಲ್ ಪ್ರಶಸ್ತಿ ಪಡೆದರು. ಆದರೆ ಕಳೆದ ಆರು ಆವೃತ್ತಿಗಳಲ್ಲೂ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರು ಒಂದು ಬ್ಯಾಡ್’ಲಕ್ ಎದುರಿಸಿರುವುದು ಮಾತ್ರ ಕಾಕತಾಳೀಯ.

ಹೌದು 1998ರಿಂದೀಚೆಗೆ ಗೋಲ್ಡನ್ ಬಾಲ್ ಪ್ರಶಸ್ತಿ ಗೆದ್ದವರ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಲ್ಲ. ಫಿಫಾ ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದವರಿಗೆ ಗೋಲ್ಡನ್ ಬಾಲ್ ನೀಡಲಾಗುತ್ತೆ. ಆದರೆ ಕಳೆದ ಆರು ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲ್ಡನ್ ಬಾಲ್ ಗೆದ್ದವರ ತಂಡ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದೆ.

ವಿಚಿತ್ರವಾದರೂ ಇದು ಸತ್ಯ. 1994ರಲ್ಲಿ ರೊಮೇರಿಯಾ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಾಗ ಬ್ರೆಜಿಲ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಆ ಬಳಿಕ 1998ರಿಂದೀಚೆಗೆ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದವರು ತಮ್ಮ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವಿಫಲವಾಗಿದ್ದಾರೆ.

ಇಲ್ಲಿದೆ ಆ ಪಟ್ಟಿ: 

2018 - ಲೂಕಾ ಮಾಡ್ರಿಚ್ - ಕ್ರೊವೇಷಿಯಾ

2014 - ಲಿಯೋನೆಲ್ ಮೆಸ್ಸಿ - ಅರ್ಜೆಂಟೀನಾ

2010 - ಡಿಯಾಗೋ ಪ್ಲೋರೆನ್ - ಉರುಗ್ವೆ

2008 - ಜಿನೆದಿನ್ ಜಿದಾನ್ - ಫ್ರಾನ್ಸ್

2002 - ಓಲಿವರ್ ಖಾನ್ - ಜರ್ಮನ್

1998 - ರೊನಾಲ್ಡೊ - ಬ್ರೆಜಿಲ್