ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಬ್ ಸರ್ಫೇಸ್ ಏರೇಷನ್ ಮತ್ತು ವ್ಯಾಕ್ಯೂಂ ಪಾವರ್ಡ್‌ ಡ್ರೈನೇಜ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆ ಪಡೆದ ರಾಜ್ಯದ ಹೆಮ್ಮೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇನ್ನುಮುಂದೆ ವರುಣನ ಕಾಟ ಶಾಶ್ವತವಾಗಿ ಮರೆಯಾಗಿದೆ.
ಬೆಂಗಳೂರು(ಏ.16): ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ರೈಸಿಂಗ್ ಪುಣೆ ಸೂಪರ್'ಜೈಟ್ಸ್ ಎದುರಿಸಲು ಸಿದ್ದವಾಗಿದೆ. ಈ ನಡುವೆಯೇ ಉದ್ಯಾನನಗರಿಯಲ್ಲಿ ಅಕಾಲಿಕ ವರುಣನ ಸಿಂಚನವಾಗಿದೆ. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಪಂದ್ಯ ರದ್ದಾಗಬಹುದೇ ಎನ್ನುವ ಆತಂಕ ಕೂಡಾ ಶುರುವಾಗಿದೆ. ಆದರೆ ಹೆಚ್ಚು ಕ್ರಿಕೆಟ್ ಪ್ರಿಯರು ಹೆಚ್ಚು ಆತಂಕಪಡಬೇಕಾಗಿಲ್ಲ. ಏಕೆಂದರೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಬ್ ಸರ್ಫೇಸ್ ಏರೇಷನ್ ಮತ್ತು ವ್ಯಾಕ್ಯೂಂ ಪಾವರ್ಡ್ ಡ್ರೈನೇಜ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಹೆಗ್ಗಳಿಕೆ ಪಡೆದ ರಾಜ್ಯದ ಹೆಮ್ಮೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇನ್ನುಮುಂದೆ ವರುಣನ ಕಾಟ ಶಾಶ್ವತವಾಗಿ ಮರೆಯಾಗಿದೆ.
