ಸಂಕಟ ಬಂದಾಗ ವೆಂಕಟರಮಣ, ಬಂದ ಕಷ್ಟಗಳನ್ನ ದೂರ ಮಾಡಪ್ಪ ಅಂತಾ ದೇವರ ಮೋರೆ ಹೋಗುವುದು ಸಾಮಾನ್ಯ​​​. ಇನ್ನೂ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳಬೇಕೆಂದರೆ ಮುಕ್ಕೋಟಿ ದೇವರಗಳನ್ನೂ ಸುತ್ತು ಹೊಡೆಯುತ್ತಾರೆ. ಅದಕ್ಕೆ ಕ್ರಿಕೆಟರ್​'​ಗಳು ಹೊರತಾಗಿಲ್ಲ. ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ವಿವಿಧ ದೇವರುಗಳನ್ನು ಹರಸಿ ಹೋಗುತ್ತಾರೆ.  

ಟೀಂ ಇಂಡಿಯಾದಲ್ಲಿ ಸ್ಥಾನ ಕೊಡಿಸಪ್ಪ ದೇವರೇ ಅಂತ ಸಾಷ್ಟಾಂಗ ನಮಸ್ಕಾರ ಹಾಕುವ ಯುವ ಕ್ರಿಕೆಟರ್​​ಗಳು ಒಂದು ಕಡೆಯಾದರೆ, ಫಾರ್ಮ್​ ಕಳೆದುಕೊಂಡು ಟೀಂನಿಂದ ಕಿಕೌಟ್​​ ಆದ ಕೆಲವರು ಮತ್ತೆ ಕಮ್​​ಬ್ಯಾಕ್​​ ಮಾಡಿಸಪ್ಪ ಅಂತ ದೇವರಿಗೆ ಬಕೀಟ್​​​ ಹಿಡಿಯುವುದು ಸರ್ವೇ ಸಾಮಾನ್ಯ.

ಹಾಗೋ ಹೀಗೋ ದೇವರು ಇವರ ಪ್ರಾರ್ಥನೆಗೆ ಕರಗಿ ಟೀಂ ಇಂಡಿಯಾದಲ್ಲಿ ಅವಕಾಶ ಕೊಡಿಸಿದರೂ ಆಡುವ ಹನ್ನೊಂದರಲ್ಲಿ ಆಡಬೇಕಾದರೆ ನಾಯಕನನ್ನು ಒಲಸಿಕೊಳ್ಳಲು ಅತ್ಯವಶ್ಯಕ. ಅದಕ್ಕಾಗಿ ತಮ್ಮ ಪ್ರದರ್ಶನವಲ್ಲದೇ ಇನ್ನು ಹೆಚ್ಚಿನದ್ದನ್ನು ಮಾಡಲೇಬೇಕು.

ಆದರೆ ಸದ್ಯ ಇಂಗ್ಲೆಂಡ್​​​ ವಿರುದ್ದದ ಟಿ20 ಸರಣಿಗಾಗಿ ನಾಗ್ಪುರ್​​'ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು, ನಿನ್ನೆ ಅಭ್ಯಾಸ ನಡೆಸಿದರು. ಆದರೆ ಅಭ್ಯಾಸದ ವೇಳೆ ನಡೆದ ಒಂದು ಘಟನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇದು ನಿನ್ನೆ ಕಾನ್ಪುರದಲ್ಲಿ ಅಭ್ಯಾಸದ ವೇಳೆ ಕಂಡ ದೃಶ್ಯ. ಟೀಂ ಇಂಡಿಯಾ ಕಾನ್ಪುರದ ಗ್ರೀನ್​ ಪಾರ್ಕ್'​ನಲ್ಲಿ ಅಭ್ಯಾಸ ನಡೆಯುತ್ತಿದ್ದಾಗ ಅಲ್ಲಿಗೆ ಐಪಿಎಲ್​​ ಅಧ್ಯಕ್ಷ ರಾಜೀವ್​​ ಶುಕ್ಲಾ ಭೇಟಿ ನೀಡಿದರು. ಈ ವೇಳೆ ಶುಕ್ಲಾ ಬಳಿಬಂದ ಟೀಂ ಇಂಡಿಯಾದ ಯುವ ಕ್ರಿಕೆಟರ್​​​ ಮಂದೀಪ್ ಸಿಂಗ್​ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಹಿರಿಯರು ಅಂತ ಕಾಲಿಗೆ ಬಿದ್ದರೋ..?: ಚಾನ್ಸ್​ ಕೊಡಿಸಲಿ ಅಂತ ಕಾಲಿಗೆ ಬಿದ್ದರೋ..?

ಸಾಮಾನ್ಯವಾಗಿ ಯಾರೇ ಬಿಸಿಸಿಐ ಅಧಿಕಾರಿಗಳನ್ನು ಆಟಗಾರರು ಕಂಡರೆ ಅವರನ್ನ ತಬ್ಬಿ ವಿಶ್​​ ಮಾಡುವುದು ಸಾಮಾನ್ಯ​​. ಆದರೆ ಈ ಯುವ ಕ್ರಿಕೆಟರ್ ಶುಕ್ಲಾ ಕಾಲಿಗೆ ಬಿದ್ದಿರುವುದು ಸದ್ಯ ಹಲವರಲ್ಲಿ ಅನುಮಾನ ಮೂಡಿಸಿದೆ. ತಂಡದಲ್ಲಿನ ಸ್ಥಾನಕ್ಕಾಗಿ ಬಕೇಟ್​​ ಹಿಡಿಯುತ್ತಿದ್ದಾರೆ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.