‘‘ಅಸ್ತಿತ್ವಕ್ಕೆ ಬಂದ ಮೂರೇ ವರ್ಷಗಳಲ್ಲಿ ಬಿಎಫ್'ಸಿ ಮಾಡಿದಂಥ ಸಾಧನೆಯನ್ನು ಈವರೆಗೆ ಯಾವುದೇ ಪುಟ್ಬಾಲ್ ಕ್ಲಬ್ ಮಾಡಿಲ್ಲ. ಹಾಗಾಗಿ, ಎಎಫ್'ಸಿ ಫೈನಲ್‌ನಲ್ಲಿ ಗೆದ್ದು ಬಿಎಫ್'ಸಿಗೆ ಮತ್ತೊಂದು ಕಿರೀಟ ತರುವ ಆಸೆಯಿದೆ’’- ಸುನಿಲ್ ಛೆಟ್ರಿ
ಕೋಲ್ಕತಾ(ನ.01): ಇದೇ ತಿಂಗಳ 5ರಂದು ಕತಾರ್ನಲ್ಲಿ ನಡೆಯಲಿರುವ ಎಎಫ್'ಸಿ ಫೈನಲ್ ಪಂದ್ಯವು ತಮ್ಮ ವೃತ್ತಿಜೀವನದ ಮಹತ್ವದ ಪಂದ್ಯವೆಂದು ಬೆಂಗಳೂರು ಫುಟ್ಬಾಲ್ ಕ್ಲಬ್ (ಎಎಫ್'ಸಿ) ತಂಡದ ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದಿದ್ದ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಜೊಹರ್ ತಂಡವನ್ನು ಮಣಿಸಿದ್ದ ಬಿಎಫ್'ಸಿ ತಂಡ ಫೈನಲ್ ತಲುಪಿತ್ತಲ್ಲದೆ, ಈ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಫುಟ್ಬಾಲ್ ಕ್ಲಬ್ ಎಂಬ ಹಿರಿಮೆ ಗಳಿಸಿದೆ.
ಈ ಬಗ್ಗೆ ಹೇಳಿಕೊಂಡಿರುವ ಛೆಟ್ರಿ, ‘‘ಅಸ್ತಿತ್ವಕ್ಕೆ ಬಂದ ಮೂರೇ ವರ್ಷಗಳಲ್ಲಿ ಬಿಎಫ್'ಸಿ ಮಾಡಿದಂಥ ಸಾಧನೆಯನ್ನು ಈವರೆಗೆ ಯಾವುದೇ ಪುಟ್ಬಾಲ್ ಕ್ಲಬ್ ಮಾಡಿಲ್ಲ. ಹಾಗಾಗಿ, ಎಎಫ್'ಸಿ ಫೈನಲ್ನಲ್ಲಿ ಗೆದ್ದು ಬಿಎಫ್'ಸಿಗೆ ಮತ್ತೊಂದು ಕಿರೀಟ ತರುವ ಆಸೆಯಿದೆ’’ ಎಂದರು.
