ನೆಟ್ಸ್ ಅಭ್ಯಾಸದ ವೇಳೆ ಭಾರತೀಯ ಬ್ಯಾಟ್ಸ್’ಮನ್’ಗಳಿಗೆ ಮಣಿಕಟ್ಟು ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಹಾಗೂ ಕರ್ನಾಟಕದ ಚೈನಾಮನ್ ಸ್ಪಿನ್ನರ್ ಶಿವಿಲ್ ಕೌಶಿಕ್ ಬೌಲಿಂಗ್ ಮಾಡಿದರು. ಮಣಿಕಟ್ಟು ಸ್ಪಿನ್ನರ್‌ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಭಾರತದ ಮುಂದಿರುವ ದೊಡ್ಡ ಗುರಿಯಾಗಿದೆ. 

ಬೆಂಗಳೂರು[ಜೂ.12]: ಜೂನ್ 14ರಿಂದ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ‘ಭಾರತ ಹಾಗೂ ಆಫ್ಘಾನಿಸ್ತಾನ ತಂಡಗಳು ಕಠಿಣ ಅಭ್ಯಾಸ ನಡೆಸುತ್ತಿವೆ. ನಾಲ್ವರು ಗುಣಮಟ್ಟದ ಸ್ಪಿನ್ನರ್’ಗಳನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿರುವ ಆಫ್ಘಾನಿಸ್ತಾನ, ‘ಭಾರತಕ್ಕೆ ಕಠಿಣ ಸವಾಲೆಸೆಯಲು ಕಾಯುತ್ತಿದೆ. ಆಫ್ಘಾನ್ ಸ್ಪಿನ್ ಮೋಡಿಗೆ ತಕ್ಕ ಉತ್ತರ ನೀಡಲು ಭಾರತೀಯರು ವಿಭಿನ್ನ ತಂತ್ರ ಅನುಸರಿಸುತ್ತಿದ್ದಾರೆ. 

ನೆಟ್ಸ್ ಅಭ್ಯಾಸದ ವೇಳೆ ಭಾರತೀಯ ಬ್ಯಾಟ್ಸ್’ಮನ್’ಗಳಿಗೆ ಮಣಿಕಟ್ಟು ಸ್ಪಿನ್ನರ್‌ಗಳಾದ ಯಜುವೇಂದ್ರ ಚಾಹಲ್ ಹಾಗೂ ಕರ್ನಾಟಕದ ಚೈನಾಮನ್ ಸ್ಪಿನ್ನರ್ ಶಿವಿಲ್ ಕೌಶಿಕ್ ಬೌಲಿಂಗ್ ಮಾಡಿದರು. ಮಣಿಕಟ್ಟು ಸ್ಪಿನ್ನರ್‌ಗಳಾದ ರಶೀದ್ ಖಾನ್ ಹಾಗೂ ಮುಜೀಬ್ ದಾಳಿಯನ್ನು ಸಮರ್ಥವಾಗಿ ಎದುರಿಸುವುದು ಭಾರತದ ಮುಂದಿರುವ ದೊಡ್ಡ ಗುರಿಯಾಗಿದೆ.

ಅಶ್ವಿನ್ ಅಸ್ತ್ರ ಬಳಸಲಿದ್ದಾರಂತೆ ಮುಜೀಬ್!: ಆಫ್ಘಾನಿಸ್ತಾದ 17 ವರ್ಷದ ಸ್ಪಿನ್ನರ್ ಮುಜೀಬ್ ರಹಮಾನ್, ಐಪಿಎಲ್ ಅನುಭವವನ್ನು ‘ಭಾರತ ವಿರುದ್ಧ ಟೆಸ್ಟ್‌ನಲ್ಲಿ ಬಳಸಲು ಕಾಯುತ್ತಿದ್ದಾರೆ. ಈ ವರ್ಷ ಐಪಿಎಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಮುಜೀಬ್‌ಗೆ ‘ಭಾರತದ ನಂ.1 ಸ್ಪಿನ್ನರ್ ಆರ್. ಅಶ್ವಿನ್, ವಿಶೇಷ ಎಸೆತವನ್ನು ಹೇಳಿಕೊಟ್ಟಿದ್ದರಂತೆ. ಅಶ್ವಿನ್‌ರಿಂದ ಕಲಿತ ಪಾಠವನ್ನು ‘ಭಾರತ ವಿರುದ್ಧ ಪ್ರಯೋಗಿಸಲು ಮುಜೀಬ್ ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ.