ಸಾಕ್ಷಿ ಮಲಿಕ್ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು. ಸಾಕ್ಷಿ ಒಂದು ವರ್ಷದ ಹಿಂದಿನ ಆ ದಿನವನ್ನು ನೆನಪಿಸಿಕೊಂಡಿದ್ದು ಹೀಗೆ...
ಬೆಂಗಳೂರು(ಆ.17): ಸಾಕ್ಷಿ ಮಲಿಕ್ ದೇಶದ ಹೆಮ್ಮೆಯ ಕುಸ್ತಿಪಟು. 2016ರ ರಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಪದಕ ಗೆದ್ದುಕೊಟ್ಟ ಗಟ್ಟಿಗಿತ್ತಿ. ಸಾಕ್ಷಿ ಮಲಿಕ್ 58 ಕೆ.ಜಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿ ಇಂದಿಗೆ ಒಂದು ವರ್ಷ ತುಂಬಿದೆ.
ರಿಯೊ ಕೂಟ ಆರಂಭವಾಗಿ 11 ದಿನಗಳು ಕಳೆದಿದ್ದರೂ ಪದಕ ಗೆಲ್ಲಲು ವಿಫಲವಾಗಿದ್ದ ಭಾರತಕ್ಕೆ ಕುಸ್ತಿ ರೂಪದಲ್ಲಿ ಮೊದಲ ಪದಕ ಸಿಕ್ಕಿತ್ತು. ಸಾಕ್ಷಿ ಮಲಿಕ್ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು. ಸಾಕ್ಷಿ ಒಂದು ವರ್ಷದ ಹಿಂದಿನ ಆ ದಿನವನ್ನು ನೆನಪಿಸಿಕೊಂಡಿದ್ದು ಹೀಗೆ...
