ಐಪಿಎಲ್’ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ಸೋಲು ನೋಡಿದ ಆಟಗಾರ ಎನ್ನುವ ಅಪಖ್ಯಾತಿಗೆ ಎಬಿಡಿ ಗುರಿಯಾಗಿದ್ದಾರೆ.

ಬೆಂಗಳೂರು(ಮೇ.15): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಜಯದೊಂದಿಗೆ ಮುಕ್ತಾಯಗೊಳಿಸಿದೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ವಿರಾಟ್ ಕೊಹ್ಲಿ ನೇತೃತ್ವದ ಆರ್’ಸಿಬಿ ಡೆಲ್ಲಿ ಡೇರ್’ಡೆವಿಲ್ಸ್ ಎದುರು 10 ರನ್ ಅಂತರದ ಜಯ ಸಾಧಿಸಿ ತನ್ನ ಈ ಬಾರಿಯ ಅಭಿಯಾನವನ್ನು ಅಂತ್ಯಗೊಳಿಸಿದೆ.

ಆದರೆ ಹೊಸ ವಿಷಯ ಏನಪ್ಪಾ ಅಂದ್ರೆ ಈ ಬಾರಿ ಎಬಿಡಿ ಆಡಿದ 9 ಪಂದ್ಯದಲ್ಲಿ ಆರ್’ಸಿಬಿ ಒಮ್ಮೆಯೂ ಗೆಲುವಿನ ರುಚಿ ನೋಡಲು ಸಾಧ್ಯವಾಗಲಿಲ್ಲ. ಕೊನೆಯ ಪಂದ್ಯಕ್ಕೂ ಮುನ್ನ ಎಬಿಡಿ ತವರಿಗೆ ಮರಳಿದ್ದರಿಂದ ಗೆದ್ದ ಪಂದ್ಯ ಸಾಕ್ಷಿಯಾಗುವಲ್ಲಿ ವಿಫಲರಾದರು. ಈ ಮೂಲಕ ಐಪಿಎಲ್’ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ಸೋಲು ನೋಡಿದ ಆಟಗಾರ ಎನ್ನುವ ಅಪಖ್ಯಾತಿಗೆ ಎಬಿಡಿ ಗುರಿಯಾಗಿದ್ದಾರೆ.

ಅದೇರೀತಿ ಸ್ಯಾಮ್ಯುಯಲ್ ಬದ್ರಿ ಕೂಡಾ ಈ ಆವೃತ್ತಿಯಲ್ಲಿ ಆಡಿದ 7 ಪಂದ್ಯಗಳಲ್ಲಿ ಒಂದೂ ಗೆಲುವಿನ ರುಚಿ ಸವಿಯಲು ಸಾಧ್ಯವಾಗಲಿಲ್ಲ.

 ಈ ಮೊದಲು 2012ರಲ್ಲಿ ಡ್ಯಾನಿಯಲ್ ಕ್ರಿಸ್ಟೀನ್ ಹಾಗೂ 2008ರಲ್ಲಿ ರವಿ ತೇಜ ತಾವಾಡಿದ 7 ಪಂದ್ಯಗಳಲ್ಲಿ ಸೋಲಿನ ರುಚಿ ಕಂಡಿದ್ದರು.