ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಯಾವ ಆಟಗಾರ ಹೆಚ್ಚು ಅಬ್ಬರಿಸಿದ್ದಾನೆ ಅಂದರೆ ಎಲ್ಲರೂ ಥಟ್​​ ಅಂತ ಸಚಿನ್​ ತೆಂಡೂಲ್ಕರ್​​, ವಿವಿಎಸ್​​ ಲಕ್ಷ್ಮಣ್​, ಯುವರಾಜ್​ ಸಿಂಗ್​ ಅಂತಾರೆ. ಆದ್ರೆ ನಾವೇಳ್ತಿದ್ದೀವಿ ಇವಱರೂ ಕಾಂಗರುಗಳ ವಿರುದ್ಧ ಹೆಚ್ಚು ಆರ್ಭಟಿಸಿಯೇ ಇಲ್ಲ. ಹಾಗಾದ್ರೆ ಯಾರಪ್ಪ ಕಾಂಗರೂಗಳನ್ನ ಕ್ರಿಕೆಟ್​​ ಲೋಕದಲ್ಲಿ ಇನ್ನಿಲ್ಲದಂತೆ ಕಅಡಿರೋದು ಅಂತೀರಾ..? ಇಲ್ಲಿದೆ ನೋಡಿ ಇಂಟೆರೆಸ್ಟಿಂಗ್ ವಿಷಯ

ಸದ್ಯ ಆಸ್ಟ್ರೇಲಿಯಾ ಕೊಹ್ಲಿ ಹುಡುಗರ ಮುಷ್ಠಿಗೆ ಸಿಲುಕಿ ನರಳಾಡುತ್ತಿದೆ. ಬ್ಯಾಕ್​ ಟು ಬ್ಯಾಕ್​ ಸೋಲುಗಳನ್ನ ಕಂಡು ಕಂಗಾಲಾಗಿದೆ. ಆದ್ರೆ ಇದೇ ಆಸೀಸ್​​ ಕೆಲ ವರ್ಷಗಳಿಂದೆ ಹೀಗಿರಲಿಲ್ಲ. ದಶಕಗಳ ಕಾಲ ಕ್ರಿಕೆಟ್​​ ಲೋಕವನ್ನ ಆಳಿ, ದೊರೆಗಳಂತೆ ಮೆರದಿತ್ತು. ಇವರುಗಳ ವಿರುದ್ಧ ಆರ್ಭಟಿಸೋದು ಅಂದ್ರೆ ಸುಲಭದ ಮಾತಾಗಿರಲಿಲ್ಲ. ಹೀಗಿದ್ರೂ ಕೆಲವರು ಅಂದ್ರೆ ಟೀಂ ಇಂಡಿಯಾದ ಸಚಿನ್​, ಲಕ್ಷ್ಮಣ್​ ಮತ್ತು ಯುವಿ ಕೆಲವೊಮ್ಮೆ ಆರ್ಭಟಿಸಿ ಆಸೀಸ್​ಗಳಿಗೆ ಶಾಕ್​ ನೀಡಿದ್ದಾರೆ. ಆದ್ರೆ ನಿಜಕ್ಕೂ ಆಸ್ಟ್ರೇಲಿಯನ್ನರನ್ನ ಹೆಚ್ಚು ಕಾಡಿದ್ದು, ಕಾಡುತ್ತಿರುವುದು ಯಾರು ಎಂದು ಹುಡುಕ ಹೊರಟ ನಮಗೆ ಸಿಕ್ಕಿದ್ದು ಟೀಂ ಇಂಡಿಯಾದ ಹಿಟ್​​ಮ್ಯಾನ್​ ರೋಹಿತ್​​ ಶರ್ಮಾ.

ಶರ್ಮಾ ಆರ್ಭಟಕ್ಕೆ ಕಾಂಗರೂಗಳು ಧೂಳೀಪಟ

ರೋಹಿತ್​ ಶರ್ಮಾ ಕ್ರಿಕೆಟ್​​ ಇತಿಹಾಸದಲ್ಲಿ ಬಲಿಷ್ಠ ಕಾಮಗರೂಗಳನ್ನ ಹೇಗೆಲ್ಲಾ ಕಾಡಿದ್ದಾರೆ ಅನ್ನೋದಕ್ಕೆ ಬೆಸ್ಟ್​​​ ಎಕ್ಸಾಂಪಲ್​ ಮೊನ್ನೆ ಮುಕ್ತಾಯವಾದ ಏಕದಿನ ಸರಣಿ. 5ಕ್ಕೆ ಏದೂ ಪಂದ್ಯದಲ್ಲು ಅದ್ಭುತ ಬ್ಯಾಟಿಂಗ್​ ಮಾಡಿದ ರೋಹಿತ್​​ ಸ್ಮಿತ್​ ಪಡೆಯನ್ನ ಗೋಳುಹೊಯ್ದುಕೊಂಡ್ರು.

ಆಸೀಸ್​​ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್​ ಶರ್ಮ ಪ್ರದರ್ಶನ ಹೀಗಿದೆ. ಒಟ್ಟು 5 ಪಂದ್ಯಗಳಲ್ಲಿ ಬ್ಯಾಟಿಂಗ್​ ಮಾಡಿರುವ ರೋಹಿತ್​ ಒಟ್ಟು 296 ರನ್​ಗಳನ್ನ ಗಳಿಸಿದ್ದಾರೆ. 59.20ರ ಸರಾಸರಿಯಲ್ಲಿ ಮ್ಯಾಟಿಂಗ್​ ಮಾಡಿದ್ದು 104.22ರ ಸ್ಟ್ರೈಕ್​ ರೇಟ್​​ ಹೊಂದಿದ್ರು. ಇದರಲ್ಲಿ 1 ಆತಕ ಮತ್ತು 2 ಅರ್ಧಶತಕ ದಾಖಲಿಸಿದ್ದಾರೆ. ಮೊನ್ನೆಯ ಕೊನೆಯ ಪಂದ್ಯದಲ್ಲಿ ಗಳಿಸಿದ್ದ 125ರನ್​ ಈ ಸರಣಿಯಲ್ಲಿ ಶರ್ಮಾರ ಬೆಸ್ಟ್​​​ ಸ್ಕೋರ್​​ ಆಗಿದೆ.

ಇದು ಜಸ್ಟ್​​​ ಎಕ್ಸಾಂಪಲ್​ ಅಷ್ಟೇ. ಇನ್ನೂ ಅವರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ರೆಕಾರ್ಡ್​ ನೋಡಿದ್ರೆ ನೀವು ಬೆಚ್ಚಿ ಬೀಳ್ತೀರಾ. ರೋಹಿತ್​​ ಕಾಮಗರೂಗಳನ್ನ ಹೀಗೆಲ್ಲಾ ಕಾಡಿದ್ದಾರ ಅಂತ ದಂಗಾಗಾ್ತೀರಾ.

ಒಟ್ಟಾರೆಯಾಗಿ ಆಸೀಸ್​​ ವಿರುದ್ಧ ಶರ್ಮಾ ರೆಕಾರ್ಡ್​ ಇಂತಿದೆ. ಇದುವರೆಗೂ 28 ಪಂದ್ಯಗಳನ್ನಾಡಿರುವ ರೋಹಿತ್​ ಒಟ್ಟು 1593 ರನ್​ಗಳನ್ನ ಗಳಿಸಿದ್ದಾರೆ. 66.38ರ ಸರಾಸರಿಯಲ್ಲಿ ಬ್ಯಾಟಿಂಗ್​ ಮಾಡಿದ್ದು 5 ಅರ್ಧಶತಕ ಮತ್ತು 6 ಶತಕ ದಾಖಲಿಸಿದ್ದಾರೆ. 209 ರನ್​ಗಳಿಸಿರೋದು ಶರ್ಮಾರ ಬೆಸ್ಟ್​​​ ಸ್ಕೋರ್​​ ಆಗಿದೆ.

ಈ ರೆಕಾರ್ಡ್​ ನೋಡಿದ್ರೆನೇ ಗೊತ್ತಾಗುತ್ತೆ ಶರ್ಮಾ ಕಾಂಗರೂಗಳ ಪಾಲಿಗೆ ಎಷ್ಟು ಡೇಂಜರಸ್​​ ಎನ್ನಿಸಿಕೊಂಡಿದ್ದಾರೆ ಅಂತ. ಇದಿಷ್ಟೇ ಅಲ್ಲ ಕಾಂಗರೂಗಳ ವಿರುದ್ಧ ವಿಶ್ವದ ಬೆಸ್ಟ್​​​ ಆಟವನ್ನಾಡಿರುವ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಆಟಗಾರನೆನಿಸಿಕೊಂಡಿದ್ದಾರೆ.

ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಟಾಪ್​ 3 ಬ್ಯಾಟ್ಸ್​​ಮನ್​ ಪಟ್ಟಿ ಇಂತಿದೆ. ಒಟ್ಟು 28 ಪಂದ್ಯಗಳಿಂದ 1542 ರನ್​ಗಳಿಸಿ 66.38 ರ ಸರಾಸರಿ ಹೊಂದಿ ಟೀಂ ಇಂಡಿಯಾದ ಹಿಟ್​ಮ್ಯಾನ್​ ಮೊದಲ ಸ್ಥಾನದಲ್ಲಿದ್ರೆ. ದಕ್ಷಿಣಾ ಆಫ್ರಿಕಾದ ಎಬಿ ಡಿವಿಲಿಯರ್ಸ್​​​ 26 ಪಂದ್ಯಗಳಿಂದ 1250 ರನ್​ಗಳನ್ನಗಳಿಸಿ 59.52 ರ ಸರಾಸರಿ ಹೊಂದಿ 2ನೇ ಸ್ಥಾನದಲ್ಲಿದ್ದಾರೆ. ಇನ್ನೂ ವಿಂಡೀಸ್​​ನ ಕ್ಲೈವ್​​ ಲಾಯ್ಡ್​​​ 32 ಪಂದ್ಯಗಳಿಂದ 976 ರನ್​ಗಳಿಸಿ 54.22 ರ ಸರಾಸರಿ ಕಾಪಾಡಿ ಆಸೀಸ್​​ ವಿರುದ್ಧ ಅತೀ ಹೆಚ್ಚು ಸರಾಸರಿ ಹೊಂದಿರುವ ಟಾಪ್​ 3ನೇ ಆಟಗಾರನೆನಿಸಿಕೊಂಡಿದ್ದಾರೆ.

ಈ ಅಂಕಿ ಅಂಶಗಳನ್ನ ನೋಡ್ತಿದ್ರೆನೇ ಗೊತ್ತಾಗುತ್ತೆ ಸದ್ಯ ಶರ್ಮಾರನ್ನ ಕಂಡ್ರೆ ಆಸೀಸ್​​ಗಳಿಗೆ ಎಷ್ಟು ಭಯ ಇದೆ ಅಂತ. ಮೊದಲು ಆಸೀಸ್​ಗಳು ಲಕ್ಷ್ಮಣ್​​ರನ್ನ ಕಂಡ್ರೆ ದಿಗಿಲು ಪಡ್ತಿದ್ರು. ಅವರ ನಂತರ ಈಗ ರೋಹಿತ್​ನನ್ನ ಕಂಡ್ರೆ ಭಯ ಪಡ್ತಿದ್ದಾರೆ. ಗಢಗಢ ಅಂತ ನಡಗುತ್ತಿದ್ದಾರೆ. ಇನ್ನೂ ಟಿ20 ಸರಣಿ ಬಾಕಿ ಇದೆ. ಅದರಲ್ಲಿ ನಮ್ಮ ಹಿಟ್​​ಮ್ಯಾನ್​ ಕಾಂಗರೂಗಳನ್ನ ಇನ್ನೆಷ್ಟು ಹೆದರಿಸುತ್ತಾರೋ ಕಾದು ನೋಡೋಣ.