ಚಿನ್ನದಂಗಡಿ ಎದುರು​  ಜನವೋ ಜನ.  ಎಲ್ಲರ ಮೊಗದಲ್ಲೂ  ಆತಂಕ..  ಪರಿಶೀಲನೆಯಲ್ಲಿ  ನಿರತರಾಗಿರುವ ಪೊಲೀಸರು.. ಹೌದು  ಈ ಎಲ್ಲಾ ದೃಶ್ಯಗಳನ್ನು ನೋಡ್ತಿದ್ರೆ ಇಲ್ಲಿ  ಕಳ್ಳತನವಾಗಿದೆ ಅನ್ನೋದು ಗೊತ್ತಾಗುತ್ತೆ. ಅಂದಹಾಗೆ ಈ ಘಟನೆ ನಡೆದಿರೋದು ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನ  ಕಾಟನ್​ ಪೇಟೆಯಲ್ಲಿ.

ಬೆಂಗಳೂರು(ಜು.09): ಇದೊಂದು ನಟೋರಿಯಸ್​ ಕೃತ್ಯ . ಈ ಕೃತ್ಯ ಅದ್ಹೇಗೆ ಮಾಡೋಕೆ ಸಾದ್ಯ ಅನ್ನೋ ವಿಚಾರವನ್ನ ಪೊಲೀಸರೇ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾರೆ. ಪಕ್ಕಾ ಪ್ರೊಫೆಷನಲ್​ಗಳೂ ಕೂಡ ಈ ಪರಿ ವರ್ಕ್​ ಮಾಡಿರೋಕೆ ಸಾದ್ಯವಿಲ್ಲ ಅನ್ನೋ ಗೊಂದಲ ಸೃಷ್ಟಿಯಾಗಿದ್ದು ಈ ಕೇಸ್​ನಿಂದ.

ಚಿನ್ನದಂಗಡಿ ಎದುರು​ ಜನವೋ ಜನ. ಎಲ್ಲರ ಮೊಗದಲ್ಲೂ ಆತಂಕ.. ಪರಿಶೀಲನೆಯಲ್ಲಿ ನಿರತರಾಗಿರುವ ಪೊಲೀಸರು.. ಹೌದು ಈ ಎಲ್ಲಾ ದೃಶ್ಯಗಳನ್ನು ನೋಡ್ತಿದ್ರೆ ಇಲ್ಲಿ ಕಳ್ಳತನವಾಗಿದೆ ಅನ್ನೋದು ಗೊತ್ತಾಗುತ್ತೆ. ಅಂದಹಾಗೆ ಈ ಘಟನೆ ನಡೆದಿರೋದು ಸದಾ ಜನಜಂಗುಳಿಯಿಂದ ಕೂಡಿರುವ ಬೆಂಗಳೂರಿನ ಕಾಟನ್​ ಪೇಟೆಯಲ್ಲಿ.

ಕಾಟನ್​ಪೇಟೆಯ ಪ್ಲಾಟಿನಮ್​ ಲಾಡ್ಜ್​ನಲ್ಲಿ ಜೂನ್​ 19 ರಿಂದ ರೂಮ್ ನಂಬರ್​ 102ರಲ್ಲಿ ಕಳ್ಳರು ತಂಗಿದ್ದರು. ಲಾಡ್ಜ್​ ಬುಕ್​ನಲ್ಲಿ ಹಿಸೇನ್​ ಎಂಬ ಹೆಸರಿನಲ್ಲಿ ಸ್ಟೇ ಆಗಿದ್ದ ಚೋರರು, ಕೊಟ್ಟಿರೋ ಅಡ್ರೆಸ್​ ಕೂಡ ಫೇಕ್​ ಎಂದು ತಿಳಿದು ಬಂದಿದೆ. ಇನ್ನು ಮೊದಲ ಮಹಡಿಯಲ್ಲಿರುವ 102 ರೂಂಗೆ ಸರಿಯಾಗಿ ಕೆಳ ಭಾಗದಲ್ಲಿರೋದೆ ಕಾಂಚನಾ ಜ್ಯೂವೆಲ್ಲರ್ಸ್​. ಕಳ್ಳರಿದ್ದ ಕೊಠಡಿಯಿಂದ ಜ್ಯೂವೆಲ್ಲರಿ ಶಾಪ್​ನ ಗೋಡೆಗೆ ಮೂರಡಿ ಸೆಂಟ್ರಿಂಗ್​ ಇದ್ದು , ಅಷ್ಟೂ ದಪ್ಪದ ಗೋಡೆಯನ್ನ ಕೊರೆದು ಒಳ ನುಗ್ಗಿದ್ದಾರೆ.

ಇನ್ನು ರೂಂನ ಪಕ್ಕದಲ್ಲಿ ರಿಸೆಪ್ಷನ್​ ಇದ್ದರೂ ಸಣ್ಣ ಶಬ್ಧವಾಗಲೀ ಬಂದಿಲ್ಲ. ಗೋಡೆ ಕೊರೆಯುವಾಗ ಡ್ರಿಲ್ಲಿಂಗ್​ ಮಷಿನ್ ಸೌಂಡ್​ ಬಾರದಿರಲಿ ಎಂದು ಟಿವಿ ಆನ್​ ಮಾಡಿ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಕಳ್ಳರು ಒಳಗೆ ನುಗ್ಗಿ ಕದ್ದಿದ್ದು ಬರೋಬ್ಬರಿ ಮೂರು ಕೇಜಿ ಚಿನ್ನ. ನಿನ್ನೆ ರಜೆ ಹಾಕಿದ್ದ ಚಿನ್ನದಂಗಡಿ ಮಾಲೀಕ ಇಂದು ಬೆಳಗೆ ಬಂದು ನೋಡಿದಾಗ ಕೃತ್ಯ ಬಯಲಿಗೆ ಬಂದಿತ್ತು.

ಕೆ ಆರ್​ ಪುರಂ ಮತ್ತು ಬೊಮ್ಮನಹಳ್ಳಿ ಪ್ರಕರಣಕ್ಕೂ ಈ ಕೃತ್ಯಕ್ಕೂ ಸಾಮ್ಯತೆ ಇರುವುದರಿಂದ ಪೊಲೀಸರು ಈ ಮೂರು ಪ್ರಕರಣದಲ್ಲಿ ಒಂದೇ ತಂಡದ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ವಿಶೇಷ ತಂಡ ರಚಿಸಿರುವ ಕಾಟನ್​ ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದಾರೆ.

--