ಇಂದು ನಡೆಯುವ ಡು ಆರ್​​ ಡೈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದರೆ, ಅಗಬಹುದಾದ ಭಾರಿ ಅವಮಾನವನ್ನ ತಪ್ಪಿಸಿಕೊಳ್ಳಬೇಕಾದರೆ ಯಾರು ಮೊದಲ ಪಂದ್ಯದ ಸೋಲಿಗೆ ಕಾರಣರಾಗಿದ್ದರೋ ಅವರೇ ಇಂದು ಗೆಲ್ಲಿಸಬೇಕಾಗಿದೆ. ಇಂದು ಈ ನಾಲ್ವರು ಕೀವೀಸ್​​​ಗಳಿಗೆ ಮಾರಕವಾದರೆ ಮಾತ್ರ ಟೀಂ ಇಂಡಿಯಾಗೆ ಗೆಲುವು.

ನ್ಯೂಜಿಲೆಂಡ್​​ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಬಲಿಷ್ಠ ಟೀಂ ಇಂಡಿಯಾ ಅಷ್ಟರ ಮಟ್ಟಿಗೆ ಹೀನಾಯವಾಗಿ ಸೋತು ಸುಣ್ಣವಾಗುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ. ಆದರೆ ಅಂದು ನಮ್ಮ ಹುಡುಗರು ಭಾರತದ ಕ್ರಿಕೆಟ್​​ ಪ್ರೇಮಿಗಳನ್ನ ನಿರಾಸೆ ಮೂಡಿಸಿದ್ದರು. ಆದರೆ ಅಂದು ಟೀಂ ಇಂಡಿಯಾ ಸೋಲು ಕಾರಣವಾಗಿದ್ದ ಬೌಲರ್​​ಗಳ ಹೀನಾಯ ಬೌಲಿಂಗ್​ ಪ್ರದರ್ಶನ.

ಅಂದು ಬ್ಯಾಟ್ಸ್​​'ಮನ್'​ಗಳು 280 ರನ್​ಗಳ ಬೃಹತ್​ ಮೊತ್ತ ಪೇರಿಸಿದ್ರೂ ಬೌಲರ್'​ಗಳು ಆ ಸ್ಕೋರ್​​'ನ್ನು ಡಿಫೆಂಡ್​​​ ಮಾಡಲು ವಿಫಲಾರಾಗಿದ್ರು. ಕೀವಿಸ್'​​​ಗಳ ವಿಕೆಟ್​​ ಪಡೆಯಲು ಪರದಾಡಿದ್ದರು. ಮಾರಕ ಬೌಲರ್ಸ್​​ಗಳಿದ್ರೂ ನ್ಯೂಜಿಲೆಂಡ್​​ ಬ್ಯಾಟ್ಸ್​​ಮನ್​ಗಳೆದುರು ಮಂಕಾಗಿಬಿಟ್ಟಿದ್ದರು.

ಅಂದು ಸೋಲಿಸಿದವರು ಇಂದು ಗೆಲ್ಲಿಸುತ್ತಾರಾ..?

ಅಂದು ಯಾವ ಬೌಲರ್ಸ್​​ ಟೀಂ ಇಂಡಿಯಾ ಸೋಲಿಗೆ ಕಾರಣರಾಗಿದ್ದರೋ ಇಂದು ಅದೇ ಬೌಲರ್ಸ್​ ಇಂದಿನ ಪಂದ್ಯಕ್ಕೆ ಟ್ರಂಪ್​ ಕಾರ್ಡ್'ಗಳಾಗಿದ್ದಾರೆ. ಸದ್ಯ ವಿಶ್ವ ಕ್ರಿಕೆಟ್​​'ನ ಬೆಸ್ಟ್​​ ಬೌಲರ್'​​​ಗಳಾದ ಯುಜವೇಂದ್ರ ಚಹಲ್​, ಕುಲ್​ದೀಪ್​​ ಯಾದವ್​​, ಭುವನೇಶ್ವರ್​​​ ಕುಮಾರ್​​​ ಮತ್ತು ಜಸ್​​ಪ್ರೀತ್​​ ಬುಮ್ರಾ ಇಂದು ಅಬ್ಬರಿಸಲೇಬೇಕಿದೆ.

ಉತ್ತಮ ಆರಂಭ ಕೊಡ್ತಾರ ಸ್ವಿಂಗ್​ ಬೌಲರ್ಸ್​

ಇಂದು ಕಿವೀಸ್​​​ ಬ್ಯಾಟ್ಸ್​​'ಮನ್​'ಗಳು ದೊಡ್ಡ ಮೊತ್ತ ಪೇರಿಸಬಾರ್ದು ಅವರನ್ನ ಆರಂಭದಲ್ಲೇ ಕಟ್ಟಿ ಹಾಕಬೇಕಾದ್ರೆ ಆರಂಭದಲ್ಲೇ ಅವರ ವಿಕೆಟ್​​ಗಳನ್ನ ಪಡೆಯಬೇಕು, ಅದರ ಜವಾಬ್ದಾರಿ ವೇಗಿಗಳಾದ ಭುವನೇಶ್ವರ್​​​ ಕುಮಾರ್​​ ಮತ್ತು ಜಸ್'​​ಪ್ರೀತ್​​​ ಬುಮ್ರಾ ಮೇಲಿದೆ. ಇವರಿಬ್ಬರೂ ಆರಂಭದಲ್ಲೇ ವಿಕೆಟ್​​ಗಳನ್ನ ಪಡೆದ್ರೆ ಮಾತ್ರ ಇಂದು ಟೀಂ ಇಂಡಿಯಾ ಮೇಲುಗೈ ಸಾಧಿಸಬಹುದು.

ಮಿಡಿಲ್​ ಓವರ್ಸ್'​​ನಲ್ಲಿ ಮಾರಕರಾಗ್ತಾರ ಸ್ಪಿನ್​ ಬ್ರದರ್ಸ್​​​..?

ಕೇವಲ ಆರಂಭದಲ್ಲಿ ವೇಗಿಗಳು ಕಾರ್ಯನಿರ್ವಹಿಸಿದ್ರೆ ಸಾಲದು ಮಿಡಿಲ್​ ಓವರ್'​​ಗಳಲ್ಲಿ ಭಾರತದ ಸ್ಪಿನ್​ ಮೋಡಿ ವರ್ಕ್​ ಆಗಬೇಕು. ಕಳೆದ ಪಂದ್ಯದಲ್ಲಿ ಮಿಡಿಲ್​ ಓವರ್​​'ಗಳಲ್ಲಿ ಕೀವಿಸ್​​ ಇಸಿಯಾಗಿ ರನ್​ ಗಳಿಸಿದ್ರು. ಆದ್ರೆ ಇಂದು ಹಾಗೆ ಆಗುವ ಹಾಗಿಲ್ಲ. ಇಂದು ರಿಸ್ಟ್​​ ಸ್ಪಿನ್ನರ್'​​ಗಳ ಮ್ಯಾಜಿಕ್​ ವರ್ಕ್​ ಆಗಲೇ ಬೇಕು. ಇಲ್ಲವಾದ್ರೆ ಹಿಂದಿನ ಪಂದ್ಯದಲ್ಲಿ ಆಗಿದ್ದೇ ಮರುಕಳಿಸುತ್ತದೆ.

ಈ ನಾಲ್ವರುಗಳ ಜೊತೆ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯಕೂಡ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇವರಲ್ಲಿ ಯಾರಾದ್ರು ಒಬ್ರು ಕೈಕೊಟ್ರು ಮುಗೀತು ಸರಣಿ ಕೈ ತಪ್ಪಿ ಹೋಗಲಿದೆ. ಸರಣಿ ಸೋತ ಅವಮಾನ ಎದುರಿಸಬೇಕಾಗುತ್ತೆ. ಆದ್ರೆ ಹಾಗಾದೇ ಇರಲಿ ಇಂದು ಟೀಂ ಇಂಡಿಯಾ ಬೌಲರ್​ಗಳು ಕ್ಲಿಕ್​ ಆಗಲಿ ಎಂಬುದಷ್ಟೇ ನಮ್ಮ ಆಶಯ.